ಹುಬ್ಬಳ್ಳಿ:ತಾರಿಹಾಳದ 110 ಕೆ.ವಿ ವಿದ್ಯುತ್ ಉಪ ಕೇಂದ್ರ ಮತ್ತು ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಚೇರಿ) ಗಾಮನಗಟ್ಟಿಯ 110 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಜೂನ್ 30 ರಂದು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ತಾರಿಹಾಳ ಕೈಗಾರಿಕಾ ಪ್ರದೇಶ ಸ್ಟೇಜ್- 1 ಮತ್ತು 2, ತಾರಿಹಾಳ ಗ್ರಾಮ, ಕೆಐಎಡಿಬಿ ಸ್ಟೇಜ್-1 ಮತ್ತು 2, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಕೆಎಸ್ಎಸ್ ಐಡಿಸಿ ಕೈಗಾರಿಕಾ ಪ್ರದೇಶ, ಜೋಡಳ್ಳಿ ಕ್ರಾಸ್ನ ಫೈಜರ್ ಇಂಡಿಯಾ ಲಿಮಿಟೆಡ್, ಶಿರೂರ ಪಾರ್ಕ್ ಕಲಬುರಗಿ ಅಪಾರ್ಟ್ಮೆಂಟ್, ಶರ್ಮಾ ಅಪಾರ್ಟ್ಮೆಂಟ್, ಕವಳೆಕರ, ಸಮರ್ಥ ಕಾಲೇಜ್, ಹಿರೇಮಠ ಅಪಾರ್ಟ್ಮೆಂಟ್, ಮದ್ರಾಸ್ ಅಟೋಗ್ಯಾಸ್, ಆರಾಧನಾ ಅಪಾರ್ಟ್ಮೆಂಟ್, ಪಿ.ಆರ್ ನಾಯಕ, ಬೃಂದಾವನ ಲೇ-ಔಟ್, ಆಶೀರ್ವಾದ ಆಟೋಗ್ಯಾಸ್, ಬಾಲಾಜಿ ಹಾಸ್ಪಿಟಲ್, ಶ್ರೇಯಾ ಕಲ್ಲೂರ ಲೇ-ಔಟ್, ಮಹಮ್ಮದ ಅಲಿ ಅಪಾರ್ಟ್ಮೆಂಟ್, ಪ್ರಭಾತ ಕಾಲೋನಿ, ಫೆಸಿಫಿಕ್ ಅಪಾರ್ಟ್ಮೆಂಟ್, ಕಲಬುರಗಿ ಆಕ್ಸಲರಿ ವಿದ್ಯಾನಗರ, ಚನ್ನಮ್ಮಾ ಬಜಾಜ್ ಶೋ-ರೂಂ, ರಿಲಾಯನ್ಸ್, ಶುಶೃತ್ ಹಾಸ್ಪಿಟಲ್, ವಿಶಾಲ್ ಮೆಗಾಮಾರ್ಟ್, ವಿದ್ಯಾನಗರ, ಜಯನಗರ, ಮಾರ್ವೆಲ್ ಆಸ್ಟ್ರಿಜ್, ಅಶ್ವತ್ ಕಾಂಪ್ಲೆಕ್ಸ್, ಸ್ಟೆಲ್ಲಾರ್ ಮಾಲ್, ಆರ್.ಯು ಪಾಟೀಲ್ ಹಾಸ್ಪಿಟಲ್, ವೆಂಕಟೇಶ್ವರ ಅಪಾರ್ಟ್ಮೆಂಟ್, ಪ್ರಜಾವಾಣಿ, ತಿಮ್ಮ ಸಾಗರಗುಡಿ, ಹುಬ್ಬಳ್ಳಿ ಗ್ಯಾಸ್ ಕಂಪನಿ, ಡೈಮಂಡ್ ಸ್ಟೋನ್, ಕಲ್ಕಿ ನಗರ, ಜಗದೀಶ್ ನಗರದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.