ಕರ್ನಾಟಕ

karnataka

ETV Bharat / state

ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳೆಲ್ಲಿ? 'ಪೊಲೀಸರು ಪತ್ತೆ ಹಚ್ತಾರೆ'- ಜಿ.ಪರಮೇಶ್ವರ್ - NAXALS WEAPONS

ಸರ್ಕಾರವು ಶರಣಾದ ನಕ್ಸಲರ ಶಸ್ತ್ರಾಸ್ತ್ರ ಹುಡುಕುವುದರಲ್ಲಿ ಮುತುವರ್ಜಿ ತೋರುತ್ತಿಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

g parameshwara
ಜಿ.ಪರಮೇಶ್ವರ್ (ETV Bharat)

By ETV Bharat Karnataka Team

Published : 8 hours ago

ಬೆಂಗಳೂರು:''ಶರಣಾಗತರಾದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಬಿಸಾಕಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮವದವರ ಜೊತೆ ಮಾತನಾಡಿದ ಅವರು, ಸರ್ಕಾರವು ನಕ್ಸಲರಿಗೆ ಪರಿಹಾರ‌ ಮತ್ತು ಪುನರ್ ವಸತಿ ಕಲ್ಪಿಸುವ ವಿಚಾರದಲ್ಲಿ ತೋರಿದ ಮುತುವರ್ಜಿಯನ್ನು ಶಸ್ತ್ರಾಸ್ತ್ರ ಹುಡುಕುವುದರಲ್ಲಿ ತೋರುತ್ತಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ''ನಾವು ಮಾಡುವ ಕೆಲಸ ಮಾಡುತ್ತೇವೆ. ಕಾಡಲ್ಲಿ ಎಲ್ಲಿ ಶಸ್ತ್ರಾಸ್ತ್ರ ಇಟ್ಟಿದ್ದಾರೆ ಎಂಬುದನ್ನು ಪೊಲೀಸರು ಹುಡುಕುತ್ತಾರೆ. ಇದಕ್ಕೆಲ್ಲ ಪ್ರಕ್ರಿಯೆ ಇದೆ. ಅದರ ಅನುಸಾರ ಪೊಲೀಸರು ಕೆಲಸ‌ ಮಾಡುತ್ತಾರೆ. ಇದೆಲ್ಲ ಬಿಜೆಪಿಯವರಿಗೆ ಗೊತ್ತಿಲ್ಲವೇ?. ಅವರು ಕೂಡ ಸರ್ಕಾರ ನಡೆಸಿದ್ದಾರೆ. ಆಗಲೂ ಇದೇ ಪೊಲೀಸ್ ಇಲಾಖೆ ಇತ್ತಲ್ಲವೇ?" ಎಂದು ತಿರುಗೇಟು ನೀಡಿದರು.

ಜಿ.ಪರಮೇಶ್ವರ್ (ETV Bharat)

ಇದನ್ನೂ ಓದಿ:ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿದ ನಕ್ಸಲರು; ಕೊಟ್ಟ ಭರವಸೆ ಈಡೇರಿಸುವುದಾಗಿ ಸಿಎಂ ಅಭಯ

ನಕ್ಸಲ್ ರವೀಂದ್ರ ಎಂಬಾತ ನಾಪತ್ತೆ ಬಗ್ಗೆ ಪ್ರತಿಕ್ರಿಯಿಸಿ, ''ಶರಣಾಗತರಾಗಿರುವ ಗುಂಪಿನವರು ಆತನನ್ನು ಹೊರಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ, ತನಿಖೆ ನಡೆದಿದೆ. ನಕ್ಸಲ್ ಚಟುವಟಿಕೆ ಬಗ್ಗೆ ನಮಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ಹೊರಗಡೆಯಿಂದ ಬಂದರೆ ನಿಗಾವಹಿಸಲಿದ್ದಾರೆ'' ಎಂದು ಹೇಳಿದರು.

ಇದನ್ನೂ ಓದಿ:ನಕ್ಸಲರು ಸಿಎಂ ಕಚೇರಿಗೆ ಬಂದು ಶರಣಾಗುವುದರಲ್ಲಿ ತಪ್ಪೇನಿದೆ : ಗೃಹ ಸಚಿವ ಪರಮೇಶ್ವರ್

''ಎನ್‌ಕೌಂಟರ್‌ನಲ್ಲಿ‌ ಮೃತಪಟ್ಟ ನಕ್ಸಲ್ ವಿಕ್ರಮ್ ಗೌಡ ಅವರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ಬೇಡಿಕೆಯನ್ನು ಪರಿಶೀಲಿಸಲಿದ್ದಾರೆ. ನಕ್ಸಲರು ಶರಣಾಗತರಾಗಿರುವ ಪ್ರಕರಣ ಮತ್ತು ವಿಕ್ರಮ್ ಗೌಡ ಪ್ರಕರಣ ಬೇರೆ'' ಎಂದು ಗೃಹ ಸಚಿವರು ತಿಳಿಸಿದರು.

ಇದನ್ನೂ ಓದಿ:'ಹುಟ್ಟೂರಿನಲ್ಲಿ ನಾನು ಓದಿದ ಕಿರಿಯ ಪ್ರಾಥಮಿಕ ಶಾಲೆಗೆ ಪುನರ್ವಸತಿ ಪ್ಯಾಕೇಜ್​ನ ಅರ್ಧ ಹಣ ನೀಡಲಿ': ಮುಖ್ಯವಾಹಿನಿಗೆ ಬರಲು ಸಿದ್ಧರಾದ ನಕ್ಸಲರು

''ಶಾಸಕಾಂಗ ಪಕ್ಷದ ಕಾರ್ಯಸೂಚಿ ಏನೆಂಬುದು ಗೊತ್ತಿಲ್ಲ. ಶಾಸಕಾಂಗ ಪಕ್ಷದಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬಜೆಟ್ ಅಧಿವೇಶನ ಸಮೀಪಿಸುತ್ತಿದೆ. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಜಾತಿಗಣತಿ ವರದಿ ಜಾರಿಗೆ ತರುವ ವಿಚಾರಗಳನ್ನು ಚರ್ಚೆ ಮಾಡುವ ಸಾಧ್ಯತೆ ಇದೆ'' ಎಂದು ಹೇಳಿದರು.

ಇದನ್ನೂ ಓದಿ:ಶರಣಾಗತರಾದ ನಕ್ಸಲರಿಗೆ ನ್ಯಾಯಾಂಗ ಬಂಧನ : ಮುಂದಿನ ಕ್ರಮಗಳೇನು?

ABOUT THE AUTHOR

...view details