ಕರ್ನಾಟಕ

karnataka

ETV Bharat / state

ಸಿಎಂ ಭೇಟಿಗೆ ಅನುಮತಿ ಕೋರಲು ಬಂದಿದ್ದ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ - BJP workers in police custody - BJP WORKERS IN POLICE CUSTODY

ಸಿಎಂ ಭೇಟಿಗೆ ಅನುಮತಿ ಕೋರಲು ಬಂದಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ಉಂಟಾಯಿತು.

bjp workers
ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ (ETV Bharat)

By ETV Bharat Karnataka Team

Published : Aug 25, 2024, 5:52 PM IST

ಬೆಂಗಳೂರು: ಕೆಪಿಎಸ್​ಸಿ ಪರೀಕ್ಷೆ ಮುಂದೂಡುವ ಕುರಿತು ಒತ್ತಾಯಿಸಲು ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಲು ಅವಕಾಶ ಕಲ್ಪಿಸುವಂತೆ ಕೋರಲು ಪೊಲೀಸ್ ಠಾಣೆಗೆ ತೆರಳಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಖಂಡಿಸಿ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ ಎಲ್ಲರನ್ನೂ ವಶಕ್ಕೆ ಪಡೆಯಲಾಯಿತು.

ಕೆಪಿಎಸ್​ಸಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ‌ ಯುವ ಮೋರ್ಚಾ ಕಾರ್ಯಕರ್ತರು, ಸಿಎಂ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದ್ದರು. ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು, ಆದರೆ ವಿಜಯನಗರದಲ್ಲಿ ಶ್ರೀಕೃಷ್ಣದೇವರಾಯ ಪಾಲಿಕೆ ಬಜಾರ್ ಉದ್ಘಾಟನೆಗೆ ಇಂದು ಸಿಎಂ ಬರಲಿದ್ದಾರೆ ಹೀಗಾಗಿ ರಾಜ್ಯಪಾಲರ ಬದಲು ಸಿಎಂ ಜೊತೆಗೆ ನೇರವಾಗಿ ಮಾತನಾಡುತ್ತೇವೆ ಅವಕಾಶ ಕೊಡಿ ಎಂದು ವಿಜಯನಗರ ಠಾಣೆಗೆ ಯುವ ಮೋರ್ಚಾ ಕಾರ್ಯಕರ್ತರು ತೆರಳಿದರು. ಆದರೆ ಇದಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಅನುಮತಿಗಾಗಿ ಠಾಣೆಗೆ ಬಂದಿದ್ದ ಎಲ್ಲರನ್ನೂ ವಶಕ್ಕೆ ಪಡೆದರು.

ಇದಕ್ಕೆ ಅಸಮಧಾನಗೊಂಡ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ವಶಕ್ಕೆ ಪಡೆದಿರುವ ಎಲ್ಲರನ್ನೂ ಬಿಡುಗಡೆ ಮಾಡಿ ಎಂದು ಆಗ್ರಹಿಸಿ ಪೊಲೀಸ್ ಠಾಣೆ ಒಳಗೆ ಮತ್ತೆ ಪ್ರತಿಭಟನೆ ನಡೆಸಿದರು. ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಠಾಣೆಗೆ ಬಂದ ಎಸಿಪಿ‌ ಚಂದನ್, ಠಾಣೆ ಒಳಗೆ ಪ್ರತಿಭಟನೆ ನೋಡಿ ಗರಂ ಆದರು.
ಎಲ್ಲರನ್ನೂ ತಮ್ಮ ಕೊಠಡಿಗೆ ಕರೆಸಿಕೊಂಡರು, ಈ ವೇಳೆ ಪೊಲೀಸರು ಎರಡನೇ ಮಹಡಿಗೆ ಪ್ರತಿಭಟನಾರ್ಥಿಗಳನ್ನು ಕರೆದೊಯ್ಯುವಾಗ ನೂಕಾಟ ತಳ್ಳಾಟವಾಯಿತು. ನಂತರ ಶಾಸಕ ಮುನಿರಾಜು ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಯಿತು. ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯುವ ವೇಳೆ ಮತ್ತೆ ನೂಕಾಟ ತಳ್ಳಾಟವಾಯಿತು. ಈ ವೇಳೆ ಓರ್ವನ ತಲೆಗೆ ಗಾಯವಾಗಿದ್ದು, ಗಾಯಾಳುವನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸಿಎಂ ಕಾರ್ಯಕ್ರಮ ಮುಗಿಯುವ ತನಕ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಹಲವರನ್ನು ಪೊಲೀಸ್​ ವಶದಲ್ಲಿ ಇರಿಸಿಕೊಂಡಿದ್ದು, ಎಲ್ಲರನ್ನ ವಿಜಯನಗರ ಪೊಲೀಸ್ ಠಾಣೆ ಒಳಗೆ ಇರಿಸಲಾಗಿದೆ.

ಇದನ್ನೂ ಓದಿ:ನಿಗದಿತ ದಿನಾಂಕದಂದೇ ಕೆಎಎಸ್ ಪರೀಕ್ಷೆ: ಮುಖ್ಯಮಂತ್ರಿ ಅಪರ ಕಾರ್ಯದರ್ಶಿಯಿಂದ ಸ್ಪಷ್ಟನೆ - KAS Exam

ABOUT THE AUTHOR

...view details