ಕರ್ನಾಟಕ

karnataka

ETV Bharat / state

ಅವಳಿನಗರದಲ್ಲಿ ಹೆಚ್ಚಿದ ಸೈಬರ್ ಕ್ರೈಂ ಪ್ರಕರಣಗಳು ; ವಂಚನೆಗೆ ಒಳಗಾಗುವುದರಲ್ಲಿ ವಿದ್ಯಾವಂತರೇ ಹೆಚ್ಚು! - cyber crime cases - CYBER CRIME CASES

ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್​ ಎನ್. ಶಶಿಕುಮಾರ್ ಅವರು ಸೈಬರ್ ಕ್ರೈಂ ಪ್ರಕರಣದ ಕುರಿತು ಮಾತನಾಡಿದ್ದಾರೆ. ಯಾವುದೇ ಹಣದ ವ್ಯವಹಾರ ನಡೆಸುವಾಗ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದಿದ್ದಾರೆ.

Police Commissioner N Shashikumar
ಪೊಲೀಸ್ ಕಮಿಷನರ್​ ಎನ್ ಶಶಿಕುಮಾರ್ (ETV Bharat)

By ETV Bharat Karnataka Team

Published : Aug 28, 2024, 11:02 PM IST

ಪೊಲೀಸ್ ಕಮಿಷನರ್​ ಎನ್ ಶಶಿಕುಮಾರ್ (ETV Bharat)

ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದೆಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಜಾಗೃತರಾಗುತ್ತಿಲ್ಲ. ಅವಳಿನಗರದಲ್ಲಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿರುವವರಲ್ಲಿ ವಿದ್ಯಾವಂತರೇ ಹೆಚ್ಚಾಗಿರುವ ಸ್ಫೋಟಕ ಮಾಹಿತಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್​ ಎನ್ ಶಶಿಕುಮಾರ್ ಹೊರಹಾಕಿದ್ದಾರೆ.

ಕೆಲಸ ಕೊಡಿಸುವುದಾಗಿ ಕರೆ ಮಾಡಿ ನಂಬಿಸುವುದು, ಹಣ ಡಬಲ್ ಮಾಡುವ ನೆಪ ಹೇಳಿ ಹಾಗೂ ಆನ್​ಲೈನ್ ಮಾರ್ಕೆಟಿಂಗ್ ಹೆಸರಲ್ಲಿ ವಂಚಿಸುವ ವಂಚಕರು ಹುಬ್ಬಳ್ಳಿ- ಧಾರವಾಡ ಅವಳಿನಗರದ ಜನರಲ್ಲಿ ಆತಂಕವನ್ನು ಹುಟ್ಟು ಹಾಕಿದ್ದಾರೆ. ಎಂಎನ್​ಸಿ ಕಂಪನಿ, ಬ್ಯಾಂಕ್ ಸಿಬ್ಬಂದಿ, ಮ್ಯಾನೇಜರ್ ಹೆಸರಲ್ಲಿ ಕರೆ ಮಾಡಿ ಮಕ್ಮಲ್ ಟೋಪಿ ಹಾಕಿರುವ ಅದೆಷ್ಟೋ ಪ್ರಕರಣಗಳನ್ನು ನೋಡಿದ್ದೇವೆ. ಅದರಲ್ಲೂ ವಿದ್ಯಾವಂತ ನಾಗರಿಕರೇ ಹೆಚ್ಚು ಮೋಸ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈಗಾಗಲೇ ಪೊಲೀಸ್ ಕಮೀಷನರೇಟ್ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದೆ. ಹೀಗಿದ್ದರೂ ಜನರು ಮೋಸ ಹೋಗುವುದು ಮಾತ್ರ ಕಡಿಮೆಯಾಗುತ್ತಿಲ್ಲ.

ಈ ಕುರಿತು ಮಾತನಾಡಿರುವ ಅವರು, ಟೆಕ್ನಾಲಜಿ ಮುಂದುವರೆಯುತ್ತಿದೆ‌. ಇದರಿಂದ ಎಷ್ಟು ಲಾಭವಿದೆಯೋ‌‌ ಅಷ್ಟೇ ಅಪಾಯವೂ ಇದೆ. ಇದಕ್ಕೆ ಆನ್​ಲೈನ್ ವಂಚನೆಗಳು ಜ್ವಲಂತ ಸಾಕ್ಷಿಯಾಗಿವೆ.‌ ಮೊಬೈಲ್ ಕೇವಲ ಮಾತನಾಡಲು ಬಳಸಲಾಗುತ್ತಿತ್ತು. ಆದ್ರೆ ಈಗ ಎಲ್ಲಾದಕ್ಕೂ ಮೊಬೈಲ್ ಬಳಕೆಯಾಗುತ್ತಿದೆ. ಯಾವುದೇ ಹಣದ ವ್ಯವಹಾರ ನಡೆಸುವಾಗ ಒಟಿಪಿ, ಫೇಕ್ ಕಾಲ್​ಗಳು, ಹಣ ಶೇರ್ ಮಾಡುವಾಗ ಪ್ರತಿಯೊಬ್ಬರು ಜಾಗೃತರಾಗಿರಬೇಕು. ಆದ್ರೆ ದುರಾದೃಷ್ಟವಶಾತ್ ಎಲ್ಲಾ ಮಾಹಿತಿ ಇರುವವರೇ ಆನ್​ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದರು.

ಎಚ್ಚರಿಕೆ ಮುಖ್ಯ : ಆನ್​ಲೈನ್​ ವಂಚನೆಗೊಳಗಾಗುವ ಮುನ್ನ ಜಾಗೃತಿ ವಹಿಸುವುದು ಮುಖ್ಯವಾಗಿದೆ. ಮನೆಯಲ್ಲಿ ತಿಳಿದವರಿಗೆ ಮಾಹಿತಿ ನೀಡಬೇಕು. ಹಿರಿಯ‌ ನಾಗರಿಕರು ಜಾಗೃತಿ ವಹಿಸುವುದು ಮುಖ್ಯವಾಗಿದೆ. ಈಗಾಗಲೇ ಸಾಕಷ್ಟು ರಿಕವರಿ‌ ಕೂಡ‌ ಮಾಡಲಾಗಿದೆ. ಪತ್ತೆ ಹಚ್ಚುವುದು ಬಹಳ ಕಡಿಮೆಯಾಗಿದೆ. ಅಪರಿಚಿತರಿರುತ್ತಾರೆ. ಮೋಸ ಹೋಗಿದ್ದವರು ಮೋಸ ಹೋಗಿರುವುದೇ ಗೊತ್ತಾಗಿರುವುದಿಲ್ಲ. ಬಹಳ ದಿನಗಳಾದ ಮೇಲೆ ಏನೂ ಮಾಡಲು ಆಗುವುದಿಲ್ಲ. ಬ್ಯಾಂಕ್ ಖಾತೆ ಪ್ರೀಜ್ ಮಾಡಿಸುವ ಮೂಲಕ ಹಣ ವರ್ಗಾವಣೆ ತಡೆಗಟ್ಟಬಹುದು. ಕೆಲವರು ಮೋಸ ಹೋದವರು ಕುಟುಂಬದವರಿಗೆ, ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ. ಅದನ್ನ ಸರಿ‌ಹೊಂದಿಸಲು ಸಾಕಷ್ಟು ಜ‌ನ ಸಾಲಸೋಲ ಮಾಡುವುದು, ಒಡವೆಗಳನ್ನು ಇಡುವಂತದ್ದು ನಡೆಯುತ್ತಿದೆ. ಸೈಬರ್ ಕ್ರೈಂ ತಡೆಗಟ್ಟಲು ಜಾಗೃತಿ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಪೊಲೀಸ್‌ ಇಲಾಖೆಯಿಂದಲೂ‌ ಕೂಡ ಸಾಕಷ್ಟು ಜಾಗೃತಿ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ- ಕಾಲೇಜು, ಮೊಹಲಾ‌ಮಿಟಿಂಗ್, ಶಾಂತಿ ಸಭೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದ್ರೆ ವಿದ್ಯಾವಂತರೆ ಮೋಸ ಹೋಗುತ್ತಿರುವುದು ಬೇಸರ ಸಂಗತಿಯಾಗಿದೆ.‌ ಅವರ ಹಣ ಅವರು ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿ. ಕೇಸ್ ದಾಖಲಿಸುವುದು, ಫ್ರೀಜ್ ಮಾಡುವುದು ಎರಡನೇ ಹಂತ. ಆದ್ರೆ ನಾಗರಿಕರು ಅನುಮಾನಾಸ್ಪದ ಸಂದೇಶ ಹಾಗೂ ಕರೆಗಳ ಮೇಲೆ ಗಮನಹರಿಸುವುದು ಮುಖ್ಯವಾಗಿದೆ. ಈ‌ ಮೂಲಕ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ಕಿವಿ‌ಮಾತು‌‌ ಹೇಳಿದ್ದಾರೆ.

ಇದನ್ನೂ ಓದಿ :ಹಳೇ ನೋಟು ಖರೀದಿ ಹೆಸರಲ್ಲಿ 63 ಲಕ್ಷ ರೂ. ವಂಚನೆ: ಹಣ ಕಳೆದುಕೊಂಡ ನಿವೃತ್ತ ಬ್ಯಾಂಕ್ ಉದ್ಯೋಗಿ! - HUBBALLI FRAUD CASE

ABOUT THE AUTHOR

...view details