ಬೆಂಗಳೂರು:ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಜುಲೈ 29ರಿಂದ ಎಲ್ಲಾ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಪೀಣ್ಯ ಫ್ಲೈಓವರ್‌ನ ಕೆನ್ನಮೆಟಲ್ ಅಪ್ಪರ್ ರ್‍ಯಾಂಪ್‌ನಿಂದ ಎಸ್.ಆರ್.ಎಸ್.ಡೌನ್ ರ್‍ಯಾಂಪ್‌ವರೆಗಿನ ಪ್ರೆಸ್ಟ್ರೆಸ್ಡ್ ಕೇಬಲ್‌ಗಳ ಬದಲಿ ಕಾಮಗಾರಿಯ ಕಾರಣದಿಂದ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ 2022ರ ಫೆಬ್ರವರಿಯಲ್ಲಿ ಆದೇಶಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದರನ್ವಯ ಜುಲೈ 29ರಿಂದ ಸಂಚಾರಕ್ಕೆ ಮುಕ್ತಗೊಳಿಸಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯಿಂದ ಆದೇಶಿಸಲಾಗಿದೆ.