ಕರ್ನಾಟಕ

karnataka

ETV Bharat / state

ಈ ಹಿಂದೆ ಕಾಂಗ್ರೆಸ್​ ಪ್ರಜ್ವಲ್​ ರೇವಣ್ಣಗೆ ಬೆಂಬಲ ನೀಡಿ ಗೆಲ್ಲಿಸಿದೆ, ಮೊದಲು ಅವರು ಉತ್ತರ ಕೊಡಬೇಕು: ಆರ್.​ಅಶೋಕ್​ - Hassan Pen Drive Case - HASSAN PEN DRIVE CASE

ಚುನಾವಣಾ ಫಲಿತಾಂಶ ಬಂದಿಲ್ಲ, ಫಲಿತಾಂಶ ಬಂದ ಮೇಲೆ ಪ್ರಜ್ವಲ್ ರೇವಣ್ಣ ಎನ್​ಡಿಎ ಗೆಲುವಿನ ಅಭ್ಯರ್ಥಿಯಾಗುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್​ ಹೇಳಿದರು.

ಈ ಹಿಂದೆ ಕಾಂಗ್ರೆಸ್​ ಪ್ರಜ್ವಲ್​ ರೇವಣ್ಣಗೆ ಬೆಂಬಲ ನೀಡಿ ಗೆಲ್ಲಿಸಿದೆ, ಮೊದಲು ಅವರು ಉತ್ತರ ಕೊಡಬೇಕು: ಆರ್​ ಅಶೋಕ್​
ಈ ಹಿಂದೆ ಕಾಂಗ್ರೆಸ್​ ಪ್ರಜ್ವಲ್​ ರೇವಣ್ಣಗೆ ಬೆಂಬಲ ನೀಡಿ ಗೆಲ್ಲಿಸಿದೆ, ಮೊದಲು ಅವರು ಉತ್ತರ ಕೊಡಬೇಕು: ಆರ್​ ಅಶೋಕ್​

By ETV Bharat Karnataka Team

Published : Apr 29, 2024, 10:46 PM IST

Updated : Apr 29, 2024, 10:54 PM IST

ಆರ್.​ಅಶೋಕ್​

ಗದಗ: ಪ್ರಜ್ವಲ್​ ರೇವಣ್ಣ ಸದ್ಯ ಸಂಸದರಿದ್ದಾರೆ. ಕಳೆದ ಬಾರಿ ಅವರ ಪರ ಪ್ರಚಾರ ಮಾಡಿದವರು, ಅವರಿಗೆ ಟಿಕೆಟ್​ ಕೊಟ್ಟು ಗೆಲ್ಲಿಸಿದವರು ಕಾಂಗ್ರೆಸ್​ನವರೇ. ಈಗ ನಮ್ಮ ಮೇಲೆ ಯಾಕೆ ಆಪಾದನೆ ಮಾಡುತ್ತೀರಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಬಿಜೆಪಿ ತನ್ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕೆಂಬ ಕಾಂಗ್ರೆಸ್​ ನಾಯಕರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ -ಜೆಡಿಎಸ್​ ಮೈತ್ರಿ ಪಕ್ಷಗಳಾಗಿವೆ. ಚುನಾವಣಾ ಫಲಿತಾಂಶ ಬಂದಿಲ್ಲ, ಫಲಿತಾಂಶ ಬಂದ ಮೇಲೆ ಪ್ರಜ್ವಲ್ ರೇವಣ್ಣ ಎನ್​ಡಿಎ ಗೆಲುವಿನ ಅಭ್ಯರ್ಥಿ ಆಗುತ್ತಾರೆ ಎಂದು ಹೇಳಿದರು.

ಪ್ರಜ್ವಲ್​ ರೇವಣ್ಣ ಸಿಟ್ಟಿಂಗ್​ ಎಂಪಿ. ಈ ಹಿಂದೆ ಕಾಂಗ್ರೆಸ್‌ನವರೇ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ಮೊದಲು ಅವರು ಉತ್ತರ ಕೊಡಬೇಕು, ನಾವಲ್ಲ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್‌ನವರು ಬಹಳ ಅರ್ಜೆಂಟಾಗಿ ಎಸ್​ಐಟಿ ರಚನೆ ಮಾಡಿದ್ದಾರೆ. ಎಸ್​ಐಟಿ ಏನು ವರದಿ ಕೊಡುತ್ತದೆ, ನ್ಯಾಯಾಲಯ ಏನು ತೀರ್ಪು ಕೊಡುತ್ತದೋ ಅದಕ್ಕೆ ತಲೆಬಾಗಲೇ ಬೇಕು. ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಕಾನೂನಿನ ಅಡಿಯಲ್ಲಿ‌ ಎಲ್ಲರೂ ಸಮಾನರು. ಕಾನೂನಿನ ಅಡಿಯಲ್ಲಿ‌ ಏನು ಕ್ರಮ ತೆಗೆದುಕೊಳ್ಳಬೇಕು ನ್ಯಾಯಾಲಯ ತೆಗೆದುಕೊಳ್ಳುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ:ಒಬ್ಬ ವ್ಯಕ್ತಿಯ ವೈಯಕ್ತಿಕ ಘಟನೆಗಳು ಯಾವ ಅಭ್ಯರ್ಥಿ, ಪಕ್ಷಕ್ಕೂ ಸಂಬಂಧಪಟ್ಟಿಲ್ಲ: ಜಿ‌.ಟಿ.ದೇವೇಗೌಡ - Hassan Pen Drive Case

Last Updated : Apr 29, 2024, 10:54 PM IST

For All Latest Updates

ABOUT THE AUTHOR

...view details