ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಕಾಡಾನೆ ತುಳಿತಕ್ಕೆ ಓರ್ವ ಬಲಿ - Tiger death

ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಕಾಡಾನೆ ತುಳಿತಕ್ಕೆ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.

ಕಾಡಾನೆ ತುಳಿತಕ್ಕೆ ವ್ಯಕ್ತಿ ಸಾವು
ಕಾಡಾನೆ ತುಳಿತಕ್ಕೆ ವ್ಯಕ್ತಿ ಸಾವು

By ETV Bharat Karnataka Team

Published : Feb 2, 2024, 1:45 PM IST

ರಾಮನಗರ/ಚಾಮರಾಜನಗರ:ಮನುಷ್ಯ ಮತ್ತು ಕಾಡು ಪ್ರಾಣಿಗಳ ಮಧ್ಯದ ಸಂಘರ್ಷ ಮುಂದುವರಿದಿದೆ. ಕನಕಪುರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಕಾಡಾನೆ ತುಳಿತಕ್ಕೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಗೌಡಹಳ್ಳಿ ಗ್ರಾಮದ ರಾಜು (48) ಸಾವಿಗೀಡಾದವರು. ಗೌಡಳ್ಳಿ ಗ್ರಾಮದಿಂದ ಸುಂಡಗಟ್ಟ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದ ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗುರುವಾರ ಮಧ್ಯಾಹ್ನ ರಾಜು ಸೇರಿದಂತೆ 3 ಮಂದಿ ಗೌಡಹಳ್ಳಿ ಸಮೀಪದ ಸಂಗಮ‌ ಅರಣ್ಯ ಪ್ರದೇಶದ ಕಾಡಿಗೆ ಹೋಗಿದ್ದರು. ಈ ವೇಳೆ ರಾಜು ಕಾಡಿನಲ್ಲಿ ದಾರಿತಪ್ಪಿ ಹೋಗಿದ್ದಾರೆ. ಮೂವರಲ್ಲಿ ಇಬ್ಬರು ವಾಪಸ್ ಗ್ರಾಮಕ್ಕೆ ಬಂದಿದ್ದಾರೆ. ಆದರೆ, ರಾಜು ಪತ್ತೆಯಾಗಿರಲಿಲ್ಲ. ಕಾಡಿನಲ್ಲಿ ಹುಡುಕಾಡಿದಾಗ ಕಾಡಾನೆ ದಾಳಿಗೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಚಾಮರಾಜನಗರದಲ್ಲಿ ಮುಳ್ಳುಹಂದಿ, ಹುಲಿ ಸಾವು:ಪ್ರತ್ಯೇಕ ಪ್ರಕರಣಗಳಲ್ಲಿ ಮುಳ್ಳುಹಂದಿ ಮತ್ತು ಹುಲಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಭಾರೀ ಗಾತ್ರದ ಮುಳ್ಳುಹಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರದ ಸಂತೇಮರಹಳ್ಳಿ ಸಮೀಪ ಇಂದು ಬೆಳಗ್ಗೆ ನಡೆದಿದೆ. ರಸ್ತೆ ದಾಟುತ್ತಿದ್ದ ಮುಳ್ಳುಹಂದಿಗೆ ಕಾರು ಇಲ್ಲವೇ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದು, ರಸ್ತೆ ತುಂಬೆಲ್ಲಾ ಮುಳ್ಳುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಘಟನಾ ಸ್ಥಳದಲ್ಲಿ ಕಂಡುಬಂತು.

ಅರಣ್ಯದಲ್ಲಿ ಹುಲಿ ಸಾವು:ಮತ್ತೊಂದೆಡೆಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಗಸ್ತಿನಲ್ಲಿ ಹುಲಿಯೊಂದು ಮೃತಪಟ್ಟಿದೆ. ಮೃತ ಹುಲಿಯು 3 ರಿಂದ 4 ವರ್ಷದ ಗಂಡು ಹುಲಿಯಾಗಿದ್ದು, ಕಾಡಿನಲ್ಲಿ ಮತ್ತೊಂದು ಹುಲಿ ಜೊತೆ ಕಾದಾಟ ನಡೆಸುವಾಗ ದೇಹಕ್ಕೆ ಬಲವಾದ ಪೆಟ್ಟುಬಿದ್ದಿದೆ. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಹುಲಿಯ ಹೊಟ್ಟೆಯ ಒಳಭಾಗದಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಕಂಡು ಬಂದಿದೆ. ಹೊಟ್ಟೆಯ ಒಳ ಭಾಗದಲ್ಲಿ ಮುಳ್ಳುಗಳು ಚುಚ್ಚಿ ರಕ್ತ ಸ್ರಾವವಾಗಿ ಹುಲಿಯು ಮೃತಪಟ್ಟಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮಾನುಸಾರ ಮೃತ ಹುಲಿಯನ್ನು ಸುಡಲಾಗಿದೆ.

ಇದನ್ನೂ ಓದಿ :ಹುಲಿ - ಸಿಂಹಧಾಮದ ಲಯನ್​​​ ಸರ್ವೇಶ್ ಅನಾರೋಗ್ಯದಿಂದ ಸಾವು

ABOUT THE AUTHOR

...view details