ಕರ್ನಾಟಕ

karnataka

ETV Bharat / state

ಮೈಸೂರು: ಒಂಟಿ ಸಲಗದ ತುಳಿತಕ್ಕೆ ಸಾವನ್ನಪ್ಪಿದ ವೃದ್ಧ - elephant attack

ಕಾಡಾನೆ ದಾಳಿಗೆ ವೃದ್ಧ ಸಾವನಪ್ಪಿರೋ ಘಟನೆ ಮುದಗನೂರು ಗ್ರಾಮದ ಜಮೀನಿನ ಬಳಿ ನಡೆದಿದೆ.

old man dies of wild elephant attack
ಮೈಸೂರಿನಲ್ಲಿ ಕಾಡಾನೆ ದಾಳಿಗೆ ವೃದ್ಧ ಸಾವು

By ETV Bharat Karnataka Team

Published : Feb 3, 2024, 12:55 PM IST

ಮೈಸೂರು: ಒಂಟಿ ಸಲಗದ ತುಳಿತಕ್ಕೆ ಸಾವನ್ನಪ್ಪಿದ ವೃದ್ಧ

ಮೈಸೂರು: ಒಂಟಿ ಸಲಗ ತುಳಿತಕ್ಕೆ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿ ಬಳಿಯ ಮುದಗನೂರು ಗ್ರಾಮದ ಜಮೀನಿನ ಬಳಿ ನಡೆದಿದೆ. ಮೃತ ವ್ಯಕ್ತಿಗೆ 75 ವರ್ಷ ವಯಸ್ಸಾಗಿತ್ತು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟು, ಒಂಟಿ ಸಲಗವನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಹುಣಸೂರು ತಾಲೂಕಿನ ವೀರನಹೊಸಳ್ಳಿ ಅರಣ್ಯ ವ್ಯಾಪ್ತಿಯ ಮುದಗನೂರು ಗ್ರಾಮದ ಬಳಿ ಜಮೀನಿನಲ್ಲಿ ರಾಗಿ ಹೊರೆ ಕಟ್ಟುತ್ತಿದ್ದ ಹರವೆ ಚಲುವಯ್ಯ ಎಂಬ ವ್ಯಕ್ತಿಯ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಆನೆ ಮೊದಲು ಕೊಣನಹೊಸಳ್ಳಿ ಗ್ರಾಮಕ್ಕೆ ಬಂದು ಅವಾಂತರ ಸೃಷ್ಟಿಸಿತ್ತು. ಗ್ರಾಮದ ಕೆಲ ಜಮೀನುಗಳಲ್ಲಿ ತಂತಿ ಕಂಬಗಳನ್ನು ಮುರಿದಿತ್ತು. ಜೊತೆಗೆ ಜಮೀನೊಂದರ ಪಂಪ್ ಸೆಟ್​​​ನ ಬಾಕ್ಸ್ ಅನ್ನು ಸಹ ತುಳಿದು ನಾಶ ಪಡಿಸಿತ್ತು. ಅಲ್ಲಿಂದ ಆ ಆನೆ ಮುದುನೂರು ಬಳಿ ಬಂದು ವೃದ್ಧನ ಮೇಲೆ ದಾಳಿ ನಡೆಸಿದೆ ಎಂಬ ಮಾಹಿತಿ ಇದೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ವೀರನಹೊಸಳ್ಳಿ ಬಳಿಯ ಕಾಡಿಗೆ ಓಡಿಸಿದ್ದು, ಮೃತಪಟ್ಟ ವೃದ್ಧನಿಗೆ ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ನೀಡುವುದಾಗಿ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ:ರಾಮನಗರದಲ್ಲಿ ಕಾಡಾನೆ ತುಳಿತಕ್ಕೆ ಓರ್ವ ಬಲಿ

ಕನಕಪುರ ಕಾಡಾನೆ ದಾಳಿ ಪ್ರಕರಣ:ನಿನ್ನೆಯಷ್ಟೇ ಕಾಡಾನೆ ತುಳಿತಕ್ಕೆ ವ್ಯಕ್ತಿಯೋರ್ವ ಬಲಿಯಾದ ಘಟನೆ ಕನಕಪುರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಗೌಡಹಳ್ಳಿ ಗ್ರಾಮದ ರಾಜು ಮೃತಪಟ್ಟ ವ್ಯಕ್ತಿ. ಇವರಿಗೆ 48 ವರ್ಷ ವಯಸ್ಸಾಗಿತ್ತು. ರಾಜು ಸೇರಿ ಮೂವರು ಸಂಗಮ‌ ಅರಣ್ಯ ಪ್ರದೇಶದ ಕಾಡಿಗೆ ಹೋಗಿದ್ದಾರೆ. ರಾಜು ಅರಣ್ಯದಲ್ಲಿ ಮಿಸ್​​ ಆಗಿದ್ದಾರೆ. ಇಬ್ಬರು ವಾಪಸ್ ಗ್ರಾಮಕ್ಕೆ ಬಂದಿದ್ದು, ರಾಜು ವಾಪಸ್​​ ಆಗಿರಲಿಲ್ಲ. ಬಳಿಕ ಪರಿಶೀಲನೆ ನಡೆಸಿದಾಗ, ಕಾಡಾನೆ ದಾಳಿಗೆ ರಾಜು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ವಯನಾಡಿನ ಜನನಿಬಿಡ ವಾಸಸ್ಥಳಕ್ಕೆ ನುಗ್ಗಿದ ಕಾಡಾನೆ.. ಶಾಂತಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ABOUT THE AUTHOR

...view details