ಹುಬ್ಬಳ್ಳಿ: "ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಪಕ್ಷದಲ್ಲಿ ಆರೋಗ್ಯಕರ ವಾತಾವರಣ ಇದೆ. ಶಿಗ್ಗಾಂವಿ, ಹಾಗೂ ಸಂಡೂರು ಎರಡು ಕ್ಷೇತ್ರದಲ್ಲಿ ಹೊಂದಾಣಿಕೆ ಚುನಾವಣೆ ನಡೆಯಬೇಕು. ಹೀಗಾಗಿ ಎರಡು ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ" ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಚನ್ನಪಟ್ಟಣ ವಿಚಾರವಾಗಿ ಇಂದು ಸಂಜೆ ಬೆಂಗಳೂರಲ್ಲಿ ಸಭೆ ಇದೆ. ಈಗಾಗಲೇ ಹೈಕಮಾಂಡ್ ನಾಯಕರು ವರದಿ ತರೆಸಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅಥವಾ ಯೋಗೇಶ್ವರ್ ಯಾರೇ ಆಗಲಿ, ಎರಡು ಪಕ್ಷಗಳ ನಾಯಕರ ತೀರ್ಮಾನ ಅಂತಿಮ" ಎಂದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (ETV Bharat) "ನಾನು ಇವತ್ತೆ ಅಧಿಕಾರ ಸಿಗಬೇಕು ಅನ್ನೋ ಹಪಾಹಪಿಯಲ್ಲಿ ಕೆಲಸ ಮಾಡುತ್ತಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಶಿಗ್ಗಾಂವಿಯಲ್ಲಿ ಜನತಾದಳ ಕಾರ್ಯಕರ್ತರ ಸಭೆ ಮಾಡುತ್ತಿದ್ದೀವೆ. ಮುಂದೆ ಜಂಟಿ ಸಭೆ ಮಾಡುತ್ತೇವೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮೊಳಗಿದ ಮುಂದಿನ ಸಿಎಂ ನಿಖಿಲ್ ಕುಮಾರಸ್ವಾಮಿ ಘೋಷಣೆ:ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಎಂದು ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರನ್ನು ತಡೆದ ನಿಖಿಲ್ ಕುಮಾರಸ್ವಾಮಿ. ನಾನಲ್ಲ. ಕುಮಾರಣ್ಣ ಸಿಎಂ ಆಗಲಿ ಅಂತ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ:ಎನ್ಡಿಎಯಿಂದ ಕಾರ್ಯಕರ್ತನಿಗೆ ಅವಕಾಶ ಕೊಟ್ಟರೆ ಕ್ಷೇತ್ರದ ಜನತೆಗಾಗಿ ನಮ್ಮ ಸಹಕಾರ: ನಿಖಿಲ್ ಕುಮಾರಸ್ವಾಮಿ