ಬೆಂಗಳೂರು:ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಹೊಸ ಸಭಾಧ್ಯಕ್ಷರ ಪೀಠವನ್ನು ಅಳವಡಿಸಲಾಗಿದೆ. 45 ಲಕ್ಷ ರೂ. ಮೌಲ್ಯದ ಪೀಠ ಇದಾಗಿದೆ.
ಬೆಂಗಳೂರು ವಿಧಾನಸೌಧದಲ್ಲಿನ ಸಭಾಧ್ಯಕ್ಷರ ಪೀಠದ ಮಾದರಿಯಲ್ಲೇ ಸುವರ್ಣಸೌಧದಲ್ಲಿ ಸಭಾಧ್ಯಕ್ಷರ ಪೀಠವನ್ನು ಸಿದ್ಧಪಡಿಸಲಾಗಿದೆ. ಪೀಠವನ್ನು ರೋಸ್ ವುಡ್ನಲ್ಲಿ ಮಾಡಲಾಗಿದೆ. ಈ ವಿಲಾಸಿ ಪೀಠಕ್ಕೆ ಸುಮಾರು 45 ಲಕ್ಷ ರೂ. ವೆಚ್ಚವಾಗಿದೆ. ಈ ಮುಂಚೆ ಸಾಮಾನ್ಯ ಮರದಿಂದ ಸರಳವಾಗಿ ಪೀಠವನ್ನು ಸಿದ್ಧಪಡಿಸಲಾಗಿತ್ತು. ಇದೀಗ ವಿಲಾಸಿ, ರೋಸ್ ವುಡ್ನಿಂದ ಪೀಠವನ್ನು ರೆಡಿ ಮಾಡಲಾಗಿದೆ.
ಪೀಠದ ವಿಶೇಷತೆ:ಪೀಠದಲ್ಲಿ ಗಂಡ ಬೇರುಂಡ, ಊಳುವ ರೈತ, ಚರಕ ಸೇರಿ ವಿವಿಧ ಕುಸುರಿಗಳೊಂದಿಗೆ ಅದ್ಧೂರಿ ಟಚ್ ಕೊಡಲಾಗಿದೆ. ಸ್ಪೀಕರ್ ಯು. ಟಿ. ಖಾದರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿ ಅಧಿಕಾರಿಗಳು ವಿಧಾನಸಭೆ ಸಭಾಂಗಣದಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಹೊಸ ಸಭಾಧ್ಯಕ್ಷರ ಪೀಠವನ್ನು ವೀಕ್ಷಿಸಿದರು.