ಬೆಳ್ತಂಗಡಿ(ದಕ್ಷಿಣ ಕನ್ನಡ):ತಾಲೂಕಿನಲ್ಲಿ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿ ಏಕಾಏಕಿ ನೀರು ಉಕ್ಕಿ ಹರಿದು ಪ್ರವಾಹ ಆತಂಕ ಸೃಷ್ಟಿಯಾಗಿತ್ತು.
ಸೋಮವಾರ ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು ಸೇರಿದಂತೆ ತಾಲೂಕಿನ ನದಿಗಳ ಉಗಮದ ಸ್ಥಳದಲ್ಲಿ ಭಾರಿ ಮಳೆಯಾಗಿದೆ. ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿ ಪ್ರವಾಹದಂತೆ ನೀರು ಹರಿದಿದೆ. ಇದರಿಂದ 10 ಕಿ.ಮೀ ದೂರದಲ್ಲಿರುವ ಬಂಡಾಜೆ ಜಲಪಾತ ತುಂಬಿ ಹರಿಯುವ ದೃಶ್ಯ ಕಡಿರುದ್ಯಾವರದಲ್ಲಿ ಗೋಚರಿಸುತ್ತಿತ್ತು. ನದಿಗಳು ಮೈದುಂಬಿ ಹರಿದು, ನೀರು ತೋಟಗಳಿಗೂ ನುಗ್ಗಿತ್ತು.