ಕರ್ನಾಟಕ

karnataka

ETV Bharat / state

ಹಳ್ಳಿಕಾರ್ ತಳಿಗಳ ಬಗ್ಗೆ ಅಪಪ್ರಚಾರ: ಪಶುಪಾಲನಾ ಇಲಾಖೆ ಆಯುಕ್ತರಿಗೆ ದೂರು - Hallikar breed - HALLIKAR BREED

ಹಳ್ಳಿಕಾರ್ ತಳಿಗಳ ಬಗ್ಗೆ ಕಟ್ಟುಕತೆ ಕಟ್ಟುತ್ತಿರುವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಿಗೆ ದೂರು ನೀಡಿದೆ.

ಹಳ್ಳಿಕಾರ್ ತಳಿ
ಹಳ್ಳಿಕಾರ್ ತಳಿ (ETV Bharat)

By ETV Bharat Karnataka Team

Published : Sep 4, 2024, 9:09 PM IST

Updated : Sep 4, 2024, 10:59 PM IST

ನವ ಕರ್ನಾಟಕ ಯುವ ಶಕ್ತಿ ವೇದಿಕೆ ಅಧ್ಯಕ್ಷ ಅಂಬರೀಶ್ (ETV Bharat)

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಹಳ್ಳಿಕಾರ್ ತಳಿಗಳ ಬಗ್ಗೆ ಕಟ್ಟುಕತೆ ಕಟ್ಟುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಿಗೆ ದೂರು ನೀಡಿದೆ.

ಈ ಕುರಿತು ನವ ಕರ್ನಾಟಕ ಯುವ ಶಕ್ತಿ ವೇದಿಕೆ ಅಧ್ಯಕ್ಷರಾದ ಅಂಬರೀಶ್ ಮಾತನಾಡಿ, ಹಳ್ಳಿಕಾರ್ ತಳಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಂಟೆಂಟ್ ಕ್ರಿಯೆಟರ್ ಮತ್ತು ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳುವಂತೆ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಆಗ್ರಹಿಸಿದರು.

ಎರಡು ಕೊಂಬುಗಳ ನಡುವೆ ಸುಳಿ ಇರುವ ಮಾಲೀಕನ ಮನೆಯಲ್ಲಿ ಅಶಾಂತಿ ಇರುವುದಾಗಿ ಹೇಳಿದ್ದಾರೆ ಮತ್ತು ಇಂತಹ ಹಸುಗಳನ್ನು ಸಾಕುವುದಿಲ್ಲ ಎಂದಿದ್ದಾರೆ. ಹಾಗಾದರೆ ಹಾಗೆ ಹೇಳಿದವರು ಕೌಟುಂಬಿಕವಾಗಿ ಸಂತೋಷವಾಗಿ ಇದ್ದಾರಾ ಎಂದು ಪ್ರಶ್ನಿಸಿದರು.

ಹಸುಗಳ ಮೈಮೇಲಿರುವ ಸುಳಿಗಳು ಪ್ರಕೃತಿ ಸಹಜವಾಗಿ ಬರುತ್ತವೆಯೇ ಹೊರತು, ಇದರಿಂದ ಹಸುಗಳ ಮಾಲೀಕರ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಸುಳಿಗಳಿಂದ ಶುಭ ಮತ್ತು ಅಶುಭವಾಗುತ್ತದೆ ಎಂಬುದಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇದೊಂದು ದಲ್ಲಾಳಿಗಳ ಕುತಂತ್ರದ ಭಾಗವಷ್ಟೇ, ಸುಳಿಗಳ ಬಗ್ಗೆ ಅಪಪ್ರಚಾರ ಮಾಡುವುದರಿಂದ 1 ಲಕ್ಷ ಬೆಲೆ ಬಾಳುವ ಹಸುಗಳು 60 ಸಾವಿರಕ್ಕೆ ಮಾರಾಟವಾಗುತ್ತವೆ. ಇದರ ಪರಿಣಾಮ ಹಳ್ಳಿಕಾರ್ ಸಾಕುವ ರೈತನ ಮೇಲೆ ಬೀಳಲಿದೆ. ಮುಂದಿನ ದಿನಗಳಲ್ಲಿ ಹಳ್ಳಿಕಾರ್ ತಳಿಗಳನ್ನು ಸಾಕುವುದನ್ನು ರೈತರು ನಿಲ್ಲಿಸಿ ಬಿಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಹದಾಯಿ, ಕಳಸಾ-ಬಂಡೂರಿ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ ವನ್ಯಜೀವಿ ಮಂಡಳಿ: ಸರ್ವಪಕ್ಷ ಸಭೆ ಕರೆಯಲು ಸಿಎಂಗೆ ಕೋನರೆಡ್ಡಿ ಪತ್ರ - Mahadayi Project

Last Updated : Sep 4, 2024, 10:59 PM IST

ABOUT THE AUTHOR

...view details