ಕರ್ನಾಟಕ

karnataka

ETV Bharat / state

ನಮ್ಮ ಮೆಟ್ರೋದಲ್ಲಿ ಒಂದೇ ದಿನದಲ್ಲಿ 9 ಲಕ್ಷಕ್ಕೂ ಅಧಿಕ ಜನರ ಸಂಚಾರ: ಹೊಸ ದಾಖಲೆ - NAMMA METRO

ನಮ್ಮ ಮೆಟ್ರೋದಲ್ಲಿ ಒಂದೇ ದಿನ 9 ಲಕ್ಷಕ್ಕೂ ಅಧಿಕ ಜನರು ಸಂಚಾರ ನಡೆಸಿದ್ದಾರೆ ಎಂದು ಬಿಎಂಆರ್​ಸಿಎಲ್​​ ಮಾಹಿತಿ ನೀಡಿದೆ.

Namma-metro
ನಮ್ಮ ಮೆಟ್ರೋ (ETV Bharat)

By ETV Bharat Karnataka Team

Published : Dec 7, 2024, 8:26 PM IST

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಒಂದೇ ದಿನ ನಮ್ಮ ಮೆಟ್ರೋದಲ್ಲಿ 9 ಲಕ್ಷಕ್ಕೂ ಅಧಿಕ ಜನ ಸಂಚಾರ ನಡೆಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿದೆ.

ಒಂದೇ ದಿನ ಗರಿಷ್ಠ ಪ್ರಯಾಣಿಕರು ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸಿದ್ದು, ಡಿಸೆಂಬರ್ 6 ರಂದು ಶುಕ್ರವಾರ 9,20,562 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ದಾಖಲೆ ಬರೆಯಲಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ನೇರಳೆ ಮಾರ್ಗದಲ್ಲಿ ಒಂದೇ ದಿನ 4,39,616 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮಾದಾವರ-ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗಿನ ಹಸಿರು ಮಾರ್ಗದಲ್ಲಿ 3,12,248 ಜನರು, ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಿಂದ 1,67,617 ಮಂದಿ ಸಂಚರಿಸಿದ್ದಾರೆ ಎಂದಿದೆ.

ಮೆಟ್ರೋ ಸಂಚಾರ ಮಾರ್ಗ ಬದಲಾಯಿಸಿಕೊಂಡವರು, ಇಲ್ಲಿಂದಲೇ ಸಂಚಾರ ಆರಂಭಿಸಿದ್ದಾರೆ. ನಾಲ್ಕು ದಿಕ್ಕಿನಿಂದ ಇಲ್ಲಿಗೆ ಬಂದು ಇಳಿದವರು ಈ ದಾಖಲೆಯ ಪ್ರಯಾಣದ ಭಾಗವಾಗಿದ್ದಾರೆ. 1081 ಪೇಪರ್ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಮೆಟ್ರೋ ನಿಗಮ ತಿಳಿಸಿದೆ.

ನಮ್ಮ ಮೆಟ್ರೋದಲ್ಲಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ (Namma Metro)

ಆಗಸ್ಟ್ 14 ರಂದು 9.17 ಲಕ್ಷ ಮಂದಿ ಒಂದೇ ದಿನ ಪ್ರಯಾಣ ಮಾಡಿದ್ದು, ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ, ಈ ದಾಖಲೆಯನ್ನು ಡಿಸೆಂಬರ್ 6 ರಂದು ದಾಖಲಾದ ಪ್ರಯಾಣಿಕರ ಸಂಖ್ಯೆ ಮೀರಿಸಿ ಮತ್ತೊಂದು ದಾಖಲೆ ಬರೆಯಲಾಗಿದೆ.

ಈ ವರ್ಷದಲ್ಲಿ ಗರಿಷ್ಠ ದೈನಂದಿನ ಪ್ರಯಾಣಿಕರ ಸಂಖ್ಯೆಯ ದಾಖಲೆಯು ಸೃಷ್ಟಿಯಾಗಿದ್ದು, ಕಳೆದ ಅಕ್ಟೋಬರ್ ತಿಂಗಳಲ್ಲಿ ಮಾಸಿಕವಾಗಿ ಅತ್ಯಧಿಕ ಜನರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಆ ತಿಂಗಳಲ್ಲಿ ಬರೋಬ್ಬರಿ 2.38 ಕೋಟಿ ಜನರು ಮೆಟ್ರೋ ಸಾರಿಗೆಯಲ್ಲಿ ಓಡಾಡಿದ್ದಾರೆ. ಇದರಿಂದ ಮೆಟ್ರೋಗೆ 60 ಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಬೆಂಗಳೂರಲ್ಲಿ ಡಬಲ್‌ ಡೆಕ್ಕರ್‌ ಮೆಟ್ರೋ: ಟೆಂಡರ್‌ ಕರೆದ ಬಿಎಂಆರ್‌ಸಿಎಲ್‌

ABOUT THE AUTHOR

...view details