ಕರ್ನಾಟಕ

karnataka

ETV Bharat / state

ಮೈಸೂರು: ಟ್ರ್ಯಾಕ್ಟರ್‌ನ ರೋಟರ್​ಗೆ ಸಿಲುಕಿ ಬಾಲಕ ಸಾವು - boy died - BOY DIED

ಟ್ರ್ಯಾಕ್ಟರ್‌ನ ರೋಟರ್​ಗೆ ಸಿಲುಕಿ ಬಾಲಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

Devarasanahalli in Nanjangudu Taluk  boy died in Devarasanahalli  Mysuru
ಟ್ರಾಕ್ಟರ್‌ನ ರೋಟರ್​ಗೆ ಸಿಲುಕಿ ಬಾಲಕ ಸಾವು (ETV Bharat)

By ETV Bharat Karnataka Team

Published : May 18, 2024, 12:44 PM IST

ಮೈಸೂರು:ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್​ ರೋಟರ್​ಗೆ ಬಾಲಕ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

8 ವರ್ಷದ ಭವಿಷ್ ಮೃತ ಬಾಲಕ. ಬಾಲಕನ ತಾಯಿ ಮಮತಾ ದೇವರಸನಹಳ್ಳಿ ಗ್ರಾಮದಿಂದ ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ ಗ್ರಾಮದಲ್ಲಿರುವ ನೆಲೆಸಿದ್ದಾರೆ. ಆದ್ರೆ, ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಬಂದಿದ್ದರು.

ಮೃತ ಬಾಲಕನ ಸೋದರಮಾವ ತನ್ನ ತಂಗಿಯ ಇಬ್ಬರು ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದರು. ಮಳೆಯಾದ ಕಾರಣ ಜಮೀನಿನಲ್ಲಿ ಬಿತ್ತನೆ ಮಾಡಲು ಟ್ರ್ಯಾಕ್ಟರ್​ನ ರೋಟರ್ ಮೂಲಕ ಉಳುಮೆ ಮಾಡುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್​ನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಬಾಲಕ ಹಠ ಹಿಡಿದಿದ್ದಾನೆ. ಬಾಲಕನ ಒತ್ತಾಯಕ್ಕೆ ಟ್ರ್ಯಾಕ್ಟರ್ ಮೇಲೆ ಸೋದರಮಾವ ಕೂರಿಸಿದ್ದಾರೆ. ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್​ನಿಂದ ಆಯತಪ್ಪಿ ಬಾಲಕ ಕೆಳಗೆ ಬಿದ್ದು, ಟ್ರ್ಯಾಕ್ಟರ್​ನ ರೋಟರಿಗೆ ಸಿಲುಕಿದಾಗ ದೇಹ ತುಂಡಾಗಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬಾಲಕನ ಮೃತದೇಹ ಕಂಡ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ. ಬಾಲಕನ ಶವವನ್ನು ಕಾಗಲವಾಡಿ ಗ್ರಾಮಕ್ಕೆ ರವಾನಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಯಾವುದೇ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರು ಅಲರ್ಟ್​; ಮಹಿಳೆಯರ ರಕ್ಷಣೆಗೆ ಕಾರ್ಯಾಚರಣೆಗಿಳಿಯಲಿದೆ ಚೆನ್ನಮ್ಮ ಪಡೆ - Chennamma Squad

ABOUT THE AUTHOR

...view details