ಮೈಸೂರು: ಮೈಸೂರು ಅರಮನೆಯ ಪ್ರಸಿದ್ಧ ಚಿನ್ನದ ಅಂಬಾರಿಯ ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 750 ಕೆ.ಜಿ ತೂಕದ ಈ ಅಂಬಾರಿಯ ಕೆಳಭಾಗ ಮತ್ತು ಹಿಂಭಾಗದ ಮರ ಹಾಳಾಗಿದ್ದು, ಇದರ ಕೆಲಸ ಸೇರಿದಂತೆ ಹಲವು ರಿಪೇರಿ ಕಾರ್ಯಗಳು ನಡೆಯುತ್ತಿರುವುದರಿಂದ ಡಿ.6 ರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ ಎಂದು ಅರಮನೆ ಮೂಲಗಳಿಂದ ತಿಳಿದುಬಂದಿದೆ.
ಮೈಸೂರು: ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ, ಏಕೆ ಗೊತ್ತಾ? - MYSURU PALACE
ವಿವಿಧ ರಿಪೇರಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಮೈಸೂರು ಅರಮನೆಯ ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

Etv Bharat (Etv Bharat)
Published : Dec 7, 2024, 5:21 PM IST
ಅಂಬಾರಿ ವೀಕ್ಷಣೆ ನಿಲ್ಲಿಸಿದಿದ್ದು, ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ. "ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಪ್ರವಾಸಕ್ಕೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಅಲಭ್ಯವಿರುವುದು ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದೆ" ಎಂದು ಅರಮನೆಯ ಗೈಡ್ವೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮರಥಾರೋಹಣ: ಚಂಪಾ ಷಷ್ಠಿ ಮಹೋತ್ಸವ ಸಂಪನ್ನ