ಮೈಸೂರು:ವಿಶ್ವವಿಖ್ಯಾತ ಮೈಸೂರು ಅರಮನೆ ಕಾಣಲು ನಿತ್ಯ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಅರಮನೆಯ ಒಳಾವರಣದಲ್ಲಿ ಬರುವ ಚಪ್ಪಲಿ ಸ್ಟಾಂಡ್, ಲಗೇಜ್ ಕೊಠಡಿ ಮತ್ತು ಶೌಚಾಲಯಗಳನ್ನು ಪ್ರವಾಸಿಗರಿಗೆ ಉಚಿತಗೊಳಿಸಿ, ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ.
ಅದರಂತೆ ವಯಸ್ಕರಿಗೆ 120 ರೂ., 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂ. (10 ವರ್ಷದೊಳಗಿನ ಮಕ್ಕಳಿಗೆ ಉಚಿತ), ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ 50 ರೂ., ಹಾಗೂ ವಿದೇಶಿ ಪ್ರವಾಸಿಗರಿಗೆ 1000 ರೂ. ಅನುಮೋದಿತ ಪರಿಷ್ಕೃತ ಶುಲ್ಕವನ್ನು ನಿಗಧಿ ಮಾಡಲಾಗಿದೆ. ಇದು ಶುಕ್ರವಾರ (ಅ.25) ರಿಂದ ಜಾರಿಗೆ ಬರಲಿದೆ ಎಂದು ಅರಮನೆ ಮಂಡಳಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಮನೆ ಮಂಡಳಿಯ ಉಪ ನಿರ್ದೇಶಕರ ಪ್ರಕಟಣೆ (ETV Bharat) ಜಿಎಸ್‌ಟಿ ಒಳಗೊಂಡಂತೆ ಈ ಮೊದಲು ವಯಸ್ಕರಿಗೆ 100 ರೂ., 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 50 ರೂ., ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ಮಕ್ಕಳಿಗೆ 30 ರೂ., ವಿದೇಶಿ ಪ್ರವಾಸಿಗರಿಗೆ 100 ರೂ. ಇತ್ತು. ಅ.25 ರಿಂದ ಅರಮನೆಯ ಪ್ರವೇಶದ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ.
ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪುನರಾರಂಭ: ನಾಡಹಬ್ಬ ದಸರಾ-2024ರ ಸಂಬಂಧ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ, ಮೈಸೂರು ಅರಮನೆ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಗುರುವಾರದಿಂದ ಪುನರಾರಂಭವಾಗಿದೆ ಎಂದೂ ಸಹ ಉಪ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ:ಅಂಬಾವಿಲಾಸ ಅರಮನೆ ದರ್ಬಾರ್ ಹಿನ್ನೆಲೆ ಏನು?: ರತ್ನ ಖಚಿತ ಸಿಂಹಾಸನ ಜೋಡಣೆ ಹೇಗೆ, ಇತಿಹಾಸ ತಿಳಿಯಿರಿ - Jeweled throne assembling