ಮಧುಗಿರಿ (ತುಮಕೂರು): ಸರಿಗಮಪ ಖ್ಯಾತಿಯ ಮಂಜಮ್ಮ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಧುಗಿರಿ ತಾಲೂಕಿನ ಕಸಬಾ ವ್ಯಾಪ್ತಿಯ ಡಿವಿ ಹಳ್ಳಿ ಗ್ರಾಮದಲ್ಲಿ ಮಂಜಮ್ಮ ವಾಸಿಸುತ್ತಿದ್ದರು. ಅಂಧ ಗಾಯಕಿಯರಾಗಿ ಮಂಜಮ್ಮ, ರತ್ನಮ್ಮ ಗುರುತಿಸಿಕೊಂಡಿದ್ದರು. ಅನಾರೋಗ್ಯ ಹಿನ್ನೆಲೆ ಮಂಜಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಮೊದಲು ದಂಡಿ ಮಾರಮ್ಮ ದೇವಸ್ಥಾನದೆದುರು ದಂಡಿ ಮಾರಮ್ಮನ ಹಾಡುಗಳನ್ನು ಹೇಳುತ್ತಿದ್ದರು. ಇದರಿಂದ ಗುರುತಿಸಲ್ಪಟ್ಟ ಅವರು 2018ರಲ್ಲಿ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ಜಗ್ಗೇಶ್, ಮಂಜಮ್ಮ ಅವರಿಗೆ ವಾಸಕ್ಕೆ ಯೋಗ್ಯ ಮನೆ ಇಲ್ಲದಿರುವುದನ್ನು ಮನಗಂಡರು. 2019ರಲ್ಲಿ ತಮ್ಮ ಸ್ವಂತ ಹಣದಿಂದ ಮನೆ ನಿರ್ಮಾಣ ಮಾಡಿಕೊಟ್ಟಿದ್ದರು. ಗೃಹಪ್ರವೇಶ ಕಾರ್ಯಕ್ರಮಕ್ಕೆ ಜಗ್ಗೇಶ್ ದಂಪತಿ ಆಗಮಿಸಿದ್ದರು.