ಕರ್ನಾಟಕ

karnataka

ETV Bharat / state

ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ - TIPTUR MURDER CASE

ತಿಪಟೂರು ನಗರದ ಹೊರವಲಯದಲ್ಲಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮೃತ  ಎನ್​.​​ ಚೇತನ್​​​​
ಮೃತ ಎನ್​.​​ಚೇತನ್​​​​ (ETV Bharat)

By ETV Bharat Karnataka Team

Published : Nov 24, 2024, 12:52 PM IST

ತುಮಕೂರು:ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ತಿಪಟೂರು ನಗರದ ಹೊರವಲಯದಲ್ಲಿ ನಡೆದಿದೆ. ತಿಪಟೂರು ತಾಲೂಕಿನ ಈಡೇನಹಳ್ಳಿ ಪಾಳ್ಯ ನಿವಾಸಿ ಎನ್.ಚೇತನ್​​​​ (35) ಕೊಲೆಯಾದವರು. ಹಾಲ್ಕುರಿಕೆ ರಸ್ತೆಯ ಧನಲಕ್ಷ್ಮಿ ಕೋಕೋ ನೆಟ್ ಫ್ಯಾಕ್ಟರಿ ಬಳಿ ಶವ ಪತ್ತೆಯಾಗಿದೆ.

ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್​, ಹೊನ್ನವಳ್ಳಿ ಸಬ್​ ಇನ್ಸ್‌ಪೆಕ್ಟರ್​​ ರಾಜೇಶ್​ ಹಾಗೂ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂರ್ಣ ವಿವರ: ತಿಪಟೂರು ಈಡೇನಹಳ್ಳಿ ಪಾಳ್ಯ ನಿವಾಸಿ ಚೇತನ್ ತಿಪಟೂರು ನಗರದ ಗುಬ್ಬಿ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಶಿವಮೊಗ್ಗದ ನಂದಿನಿ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದು, ಕೌಟುಂಬಿಕ ಕಲಹದಿಂದ ಬೇರ್ಪಟಿದ್ದರು. ಸ್ವಂತ ಲಾರಿ ಹೊಂದಿದ್ದ ಇವರು, ತಿಪಟೂರಿನ ಕಾರ್ಖಾನೆಗಳಿಂದ ತೆಂಗಿನಕಾಯಿ ಸರಬರಾಜು ​ಮಾಡುತ್ತಿದ್ದರು. ಈ ನಡುವೆ ಆಲೂರು ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ನಿನ್ನೆ ಪಾನಮತ್ತನಾದ ಚೇತನ್, ತಿಪಟೂರು ತಾಲೂಕಿನ ಹಾಲ್ಕುರಿಕೆ ರಸ್ತೆ ಧನಲಕ್ಷ್ಮಿ ಕಾಯಿ ಪ್ಯಾಕ್ಟರಿ ಬಳಿ ಇರುವ ಯುವತಿಯ ತಂದೆ ಲೋಕೇಶಪ್ಪ ಅವರ ಬಳಿ ಹೋಗಿ ನಿಮ್ಮ ಮಗಳನ್ನು ಕೊಡಿ ಮದುವೆಯಾಗುತ್ತೇನೆ ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಅವರು, ನಿನಗೆ ನನ್ನ ಮಗಳನ್ನು ಕೊಡುವುದಿಲ್ಲ ಎಂದಿದ್ದಾರೆ. ಈ ವಿಚಾರಕ್ಕೆ ಚೇತನ್​, ಲೋಕೇಶಪ್ಪ ಹಾಗೂ ಆತನ ಹೆಂಡತಿ ಕಲಾವತಿ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಹೊನ್ನವಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಶವವನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸೆರೆ, ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ

ABOUT THE AUTHOR

...view details