ಕರ್ನಾಟಕ

karnataka

ETV Bharat / state

ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ಹನಿಟ್ರ್ಯಾಪ್ ಆರೋಪ, ಮಹಿಳೆ ಸೇರಿ ಇಬ್ಬರ ಬಂಧನ - MUMTAZ ALI SUICIDE CASE

ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ ಸಂಬಂಧ ಹನಿಟ್ರ್ಯಾಪ್ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ​

ಮುಮ್ತಾಜ್ ಅಲಿ
ಮುಮ್ತಾಜ್ ಅಲಿ (ETV Bharat)

By ETV Bharat Karnataka Team

Published : Oct 8, 2024, 8:54 PM IST

Updated : Oct 8, 2024, 9:19 PM IST

ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ಮತ್ತು ಉದ್ಯಮಿ ಮುಮ್ತಾಜ್ ಅಲಿ‌ ಅವರ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣವೆಂಬ ಆರೋಪದ‌ ಹಿನ್ನೆಲೆಯಲ್ಲಿ ನಗರದ ಕಾವೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರೆಹಮತ್ ಮತ್ತು ಶೋಯಬ್ ಬಂಧಿತರು. ಇವರನ್ನು ಬಂಟ್ವಾಳದ ಮೆಲ್ಕಾರ್ ಬಳಿ ಪತ್ತೆ ಹಚ್ಚಲಾಗಿದೆ.

ಬಿ.ಎಂ.ಮುಮ್ತಾಜ್ ಅಲಿ ಅವರು ಭಾನುವಾರ ಕೂಳೂರು ಸಮೀಪದ ಸೇತುವೆಯ ಬಳಿ ಕಾರು ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ಹನಿಟ್ರ್ಯಾಪ್​ಗೆ ಹೆದರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ರೆಹಮತ್ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಉಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಮೊಯ್ದೀನ್ ಬಾವ ಸಹೋದರನ ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್‌ ಆರೋಪ: ಪೊಲೀಸ್ ಕಮಿಷನರ್ ಮಾಹಿತಿ

ಹನಿಟ್ರ್ಯಾಪ್ ಆರೋಪ:ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿ ಮುಮ್ತಾಜ್ ಅಲಿ ಅವರನ್ನು‌ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿ ಅವರ ಸಂಬಂಧಿಕರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಬ್, ಸಿರಾಜ್ ಎಂಬವರು ಹನಿಟ್ರ್ಯಾಪ್​ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳು ವಿದೇಶಕ್ಕೆ ತೆರಳದಂತೆ ಎಲ್​ಒಸಿ ಜಾರಿ ಮಾಡಿದ್ದರು.

ತನ್ನ ಸಹೋದರನಿಗೆ 2024ನೇ ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ನಿರಂತರ ಬೆದರಿಸಿ ಲಕ್ಷಾಂತರ ರೂ. ಹಣ ಕಿತ್ತುಕೊಂಡಿದ್ದಾರೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟ ಆರೋಪಿಗಳಾದ ರೆಹಮತ್ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಬ್, ಸಿರಾಜ್ (ಅಬ್ದುಲ್ ಸತ್ತಾರ ಕಾರು ಚಾಲಕ) ಇವರುಗಳ ವಿರುದ್ಧ ಕ್ರಮ ಜರುಗಿಸಬೇಕು. ಆರೋಪಿಗಳು ಮುಮ್ತಾಜ್ ಅಲಿಯಿಂದ ಈಗಾಗಲೇ 50 ಲಕ್ಷ ರೂ.ಗೂ ಅಧಿಕ ಮೊತ್ತ ಪಡೆದಿದ್ದಾರೆ. ಇದರಲ್ಲಿ 25 ಲಕ್ಷ ರೂ.ಯ ಚೆಕ್ ಅನ್ನೂ ಪಡೆದಿದ್ದಾರೆ ಎಂದು ಮುಮ್ತಾಜ್ ಅಲಿ ಅವರ ಸಹೋದರ ಹೈದರ್ ಅಲಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ - Moidin Bava Brother Missing

ಮುಮ್ತಾಜ್ ಅಲಿ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯ್ದಿನ್ ಬಾವ ಮತ್ತು ಮಾಜಿ MLC ಆಗಿರುವ ಬಿ.ಎಂ.ಫಾರೂಕ್ ಅವರ ಸಹೋದರ.

Last Updated : Oct 8, 2024, 9:19 PM IST

ABOUT THE AUTHOR

...view details