ಕರ್ನಾಟಕ

karnataka

ETV Bharat / state

ಇಡಿ ನೋಟಿಸ್ ರಾಜಕೀಯ ಪ್ರೇರಿತ, ಮುಡಾ ಪ್ರಕರಣವೇ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ - CM ON MUDA CASE

ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇ.ಡಿ. ನೋಟಿಸ್ ನೀಡಿದ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇದೊಂದು ರಾಜಕೀಯ ಪ್ರೇರಿತ ಅಲ್ಲದೆ ಇನ್ನೇನು? ಎಂದಿದ್ದಾರೆ.

CM ON MUDA CASE
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Jan 28, 2025, 5:26 PM IST

ಬೆಂಗಳೂರು: ಇ.ಡಿ. ನೋಟಿಸ್ ರಾಜಕೀಯ ಪ್ರೇರಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡಿ ನೋಟಿಸ್ ರಾಜಕೀಯ ಪ್ರೇರಿತವೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಇದು ರಾಜಕೀಯ ಪ್ರೇರಿತ ಅಲ್ಲದೆ ಇನ್ನೇನು?. ಮುಡಾ ಕೇಸೇ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.

ಸಿಬಿಐಗೆ ತನಿಖೆ ಕೊಡೋ ಆತಂಕ ಇದೆಯಾ? ಎಂಬ ಬಗ್ಗೆ ಪ್ರತಿಕ್ರಿಯಿಸುತ್ತಾ, ನ್ಯಾಯಾಧೀಶರು ಏನು ಮಾಡ್ತಾರೆ ಗೊತ್ತಿಲ್ಲ. ನ್ಯಾಯಾಧೀಶರು ಆದೇಶವನ್ನ ಕಾಯ್ದಿರಿಸಿದ್ದಾರೆ. ನನಗೆ ಯಾಕೆ ಆತಂಕ ಆಗುತ್ತದೆ? ನನಗೆ ನ್ಯಾಯ ಸಿಗುತ್ತೆ ಅಂತ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಪತ್ನಿಗೆ ಇ.ಡಿ. ನೋಟಿಸ್ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಡಿಯವರು ನೋಟಿಸ್ ಕೊಟ್ಟಿದ್ರು. ಅದಕ್ಕೆ ಹೈಕೋರ್ಟ್ ತಡೆ ನೀಡಿದೆ. ಯಾಕೆ ಇಷ್ಟು ಆತುರ ಅಂತ ನ್ಯಾಯಾಧೀಶರು ಕೇಳಿದ್ದಾರೆ. ತನಿಖೆ ನಡೆಯುತ್ತಿದೆ. ಸಿಬಿಐಗೆ ಕೊಡಬೇಕಾ, ಬೇಡ್ವಾ ಚರ್ಚೆ ಆಗ್ತಿದೆ. ಅದರ ಬಗ್ಗೆ ಆದೇಶ ಕಾಯ್ದಿರಿಸಿದೆ. ಈ ಹಂತದಲ್ಲಿ ನೀವು ಆತುರ ಮಾಡೋದು ಸರಿಯಲ್ಲ ಅಂತ ಕೋರ್ಟ್ ಹೇಳಿದೆ. ಹೀಗಾಗಿ ಕೋರ್ಟ್ ಸ್ಟೇ ಕೊಟ್ಟಿದೆ ಎಂದರು.

ಕುಂಭ ಮೇಳ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಈ ಬಗ್ಗೆ ಅವರನ್ನೇ ಕೇಳಿ. ಪುಣ್ಯಸ್ನಾನ ಸಂಪ್ರದಾಯ ಅಷ್ಟೆನೇ. ಕುಂಭ ಮೇಳದಲ್ಲಿ ಸ್ನಾನ ಮಾಡುವುದು, ಗಂಗೆಯಲ್ಲಿ ಸ್ನಾನ ಮಾಡುವುದು ಸಂಪ್ರದಾಯ. ಪಾಪ ಪರಿಹಾರಕ್ಕೆ ಮಾಡುವುದು ಎಂಬ ನಂಬಿಕೆ ಇದೆ. ನಾವೆಲ್ಲಾ ಬಸವಣ್ಣನವರ ಅನುಯಾಯಿಗಳು ಎಂದು ಸಿಎಂ ಹೇಳಿದರು.

ಇದನ್ನೂ ಓದಿ:ಮಹಾಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪುಣ್ಯಸ್ನಾನ - AMIT SHAH IN MAHAKUMBH

ABOUT THE AUTHOR

...view details