ಕರ್ನಾಟಕ

karnataka

ETV Bharat / state

ಮುಡಾ ಪ್ರಕರಣ ದಸರಾ ಮೇಲೆ ಪರಿಣಾಮ ಬೀರದು: ಸಚಿವ ಮಹದೇವಪ್ಪ - Mysuru Dasara

ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರಲಿದ್ದಾರೆ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಇದೇ ವೇಳೆ, ಮುಡಾ ಪ್ರಕರಣ ದಸರಾದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

MYSURU DASARA
ಸಚಿವ ಡಾ.ಹೆಚ್.‌ಸಿ.ಮಹದೇವಪ್ಪ (ETV Bharat)

By ETV Bharat Karnataka Team

Published : Aug 21, 2024, 4:36 PM IST

ಮೈಸೂರು: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರದ್ದು ತಪ್ಪೇನೂ ಇಲ್ಲ. ಅಲ್ಲದೇ ಈ ಪ್ರಕರಣ ದಸರಾದ ಮೇಲೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.‌ಸಿ.ಮಹದೇವಪ್ಪ ಹೇಳಿದ್ದಾರೆ.

ಗಜಪಯಣಕ್ಕೆ ಚಾಲನೆ (ETV Bharat)

ವೀರನಹೊಸಹಳ್ಳಿಯಲ್ಲಿ ಇಂದು ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ಹೋಗುತ್ತಿರುತ್ತದೆ, ನರಿ ಅದೇನೋ ಬೀಳುತ್ತದೆ ಎಂದು ಕಾಯುತ್ತಿರುತ್ತದೆ. ಇವರ ಪರಿಸ್ಥಿತಿಯೂ ಹಾಗೇ ಆಗಿದೆ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟರು.

ಗಜಪಯಣಕ್ಕೆ ಚಾಲನೆ (ETV Bharat)

ನಮ್ಮ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಏಳು ಕೋಟಿ ಜನ ಮತ ಹಾಕಿದ್ದಾರೆ. ಕಾಂಗ್ರೆಸ್​ ಸರ್ಕಾರ ಸುಭದ್ರ. ನಮ್ಮನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಆ ರೀತಿಯ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದರು.

ಅಂಬಾರಿ ಹೊರಲಿರುವ ಅಭಿಮನ್ಯು:ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಆದ್ದರಿಂದ ಸಾಂಪ್ರದಾಯಕ ಹಾಗೂ ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಕಳೆದ ಬಾರಿ ಅಭಿಮನ್ಯು ಆನೆ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿತ್ತು. ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ ಎಂದು ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಸಚಿವ ಈಶ್ವರ್‌ ಖಂಡ್ರೆ (ETV Bharat)

ಅರ್ಜುನ ಕಾಡಾನೆ ದಾಳಿಯಿಂದ ಮೃತಪಟ್ಟಿತ್ತು. ಮೃತಪಟ್ಟ ಸ್ಥಳ ಹಾಗೂ ಅದರ ಆನೆ ಶಿಬಿರದಲ್ಲೂ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

ಇದನ್ನೂ ಓದಿ:ದಸರಾ ಆನೆ ಅರ್ಜುನನ ನೆನಪು ಕಾಡುತ್ತಿದೆ: ಅರ್ಚಕ ಪ್ರಹ್ಲಾದ್‌ ರಾವ್ - Mysuru Dasara 2024

ABOUT THE AUTHOR

...view details