ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಫುಲ್ ಆಕ್ಟಿವ್ ಆಗಿದ್ದಾರೆ. ಸಂಸದರಾದಾಗಿನಿಂದ ಜಿಲ್ಲೆಯಲ್ಲಿ ಇಷ್ಟೊಂದು ಪ್ರವಾಸ ಕೈಗೊಂಡಿರಲಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಕ್ಟಿವ್ ಆಗಿದ್ದಾರೆ. ಕಳೆದ 20 ದಿನಗಳಲ್ಲಿ ಬರೋಬ್ಬರಿ ಏಳು ಬಾರಿ ಮಂಡ್ಯ ಪ್ರವಾಸ ಮಾಡಿದ್ದಾರೆ. ಅಲ್ಲದೆ ಎಲ್ಲಾ ವಿಷಯಗಳಲ್ಲೂ ಮುಂದಾಳತ್ವ ವಹಿಸುತ್ತಿದ್ದಾರೆ. ಹಾಗಾದ್ರೆ ಏನೆಲ್ಲಾ ಮಾಡ್ತಿದ್ದಾರೆ ಅನ್ನೋದನ್ನು ಈ ಸ್ಟೋರಿ ನೋಡಿ.
ಹೌದು, ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಇದರಿಂದಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಫುಲ್ ಆಕ್ಟಿವ್ ಆಗಿದ್ದಾರೆ. ಸಂಸದರಾದಾಗಿನಿಂದ ಅಷ್ಟೇನೂ ಬಿರುಸಿನಿಂದ ಓಡಾಡದ ಸುಮಲತಾ ಅವರು ಈಗ ಹೆಚ್ಚು ಸಕ್ರಿಯರಾಗಿದ್ದಾರೆ. ಕಳೆದ 20 ದಿನಗಳಲ್ಲಿ ಏಳು ಬಾರಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೇವಸ್ಥಾನಗಳು, ಮದುವೆ ಸಮಾರಂಭಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಲ್ಲದೆ ಗಣಿಗಾರಿಕೆ ವಿರುದ್ಧ ಹೋರಾಟ ನಿರಂತರ ಎಂದಿರುವ ಸುಮಲತಾ ಅಂಬರೀಶ್ ಜನರೊಂದಿಗೆ ಹೆಚ್ಚು ಬೆರೆಯುತ್ತಿದ್ದಾರೆ.
ವಿಪರ್ಯಾಸವೆಂದರೆ ಚುನಾವಣೆ ಹತ್ತಿರ ಬರ್ತಿದ್ರು ಜೆಡಿಎಸ್ಸಿಗರು ಸೈಲೆಂಟಾಗಿದ್ದಾರೆ. ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ, ಯಾವುದೇ ಕಾರಣಕ್ಕೂ ಟಿಕೆಟ್ ಕೈ ತಪ್ಪಲ್ಲ ಅಂತಿದ್ದ ಜೆಡಿಎಸ್ ನಾಯಕರು, ಈಗ ಮೌನಕ್ಕೆ ಜಾರಿದ್ದಾರೆ. ಇದನ್ನೇ ಲಾಭ ಪಡೆದ ಸುಮಲತಾ ಈಗಾಗಲೇ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದಾರೆ. ಟಿಕೆಟ್ ತನಗೇ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಮೋದಿ ಅವರೇ ನನಗೆ ಸ್ಫೂರ್ತಿ. ಜಗತ್ತೇ ಅವರನ್ನು ವಿಶ್ವಗುರು ಅಂತ ಒಪ್ಪಿಕೊಂಡಿದೆ ಅಂತ ಪ್ರಧಾನಿ ಮೋದಿ ಅವರನ್ನ ಹೊಗಳಿದ್ದಾರೆ. ಅಲ್ಲದೆ ನನ್ನ ಕಾರ್ಯವೈಖರಿ ನೋಡಿ ನನಗೇ ಟಿಕೆಟ್ ಅಂತಿಮಗೊಳಿಸುತ್ತಾರೆ ಎಂದು ಹೇಳಿದ್ದಾರೆ.
ಈಗಾಗಲೇ ಬಹಳ ಚುರುಕಾಗಿರೋ ಸಂಸದರು ಕ್ಷೇತ್ರದಲ್ಲಿ ಯಾರೇ ಯಾವುದೇ ಕಾರ್ಯಕ್ರಮಕ್ಕೆ ಕರೆದ್ರೂ ಹೋಗಿ ಬರ್ತಿದ್ದಾರೆ. ಆದಿ ಚುಂಚನಗಿರಿ ಶ್ರೀಗಳ ಆಶೀರ್ವಾದವನ್ನೂ ಪಡೆದಿದ್ದಾರೆ. ಒಟ್ಟಾರೆ, ಸಂಸದೆ ಸುಮಲತಾ ಅವರ ಈ ಆಕ್ಟಿವ್ನಿಂದಾಗಿ ಜೆಡಿಎಸ್ಸಿಗರು ನಿಬ್ಬೆರಗಾಗಿದ್ದಾರೆ. ಮೈತ್ರಿ ಟಿಕೆಟ್ ಯಾರಿಗೆ ಎಂಬುದು ಈಗಲೂ ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ :ಪಾಕ್ ಪರ ಘೋಷಣೆ ಖಂಡನೀಯ, ದೇಶ ಮೊದಲು ಆಮೇಲೆ ರಾಜಕೀಯ: ಸುಮಲತಾ