ಕರ್ನಾಟಕ

karnataka

ETV Bharat / state

ನಾನು ಕೋವಿಡ್​ನಲ್ಲಿ ಟಾಸ್ಕ್‌ ಫೋರ್ಸ್‌ ಮುಖ್ಯಸ್ಥನೇ ಅಲ್ಲ, ತನಿಖೆಯಾಗಲಿ ನೋಡೋಣ : ಸಂಸದ ಸಿ ಎನ್ ಮಂಜುನಾಥ್‌ - MP C N MANJUNATH

ಸಂಸದ ಡಾ. ಸಿ ಎನ್ ಮಂಜುನಾಥ್‌ ಅವರು ಕೋವಿಡ್​ ಹಗರಣದ ಕುರಿತು ಮಾತನಾಡಿ, ನಾನು ಕೋವಿಡ್​ ಟಾಸ್ಕ್​​ ಫೋರ್ಸ್​ ಮುಖ್ಯಸ್ಥ ಅಲ್ಲ ಎಂದಿದ್ದಾರೆ.

mp-c-n-manjunath
ಸಂಸದ ಸಿ ಎನ್ ಮಂಜುನಾಥ್‌ (ETV Bharat)

By ETV Bharat Karnataka Team

Published : Nov 18, 2024, 3:18 PM IST

Updated : Nov 18, 2024, 4:28 PM IST

ಮೈಸೂರು :ನಾನು ಕೋವಿಡ್​ ವೈರಸ್​ ಹರಡಿದ್ದ ಸಮಯದಲ್ಲಿ ಟಾಸ್ಕ್‌ ಫೋರ್ಸ್‌ ಮುಖ್ಯಸ್ಥ ಆಲ್ಲ. ನನ್ನದು ಸಲಹೆ ಮತ್ತು ಅಭಿಪ್ರಾಯ ಕೊಡುವುದು ಅಷ್ಟೇ. ತನಿಖೆಯಾಗಲಿ ನೋಡೋಣ ಎಂದು ಸಂಸದ ಡಾ. ಸಿ ಎನ್ ಮಂಜುನಾಥ್‌ ಹೇಳಿದರು.

ನಗರದಲ್ಲಿಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಧ್ಯಮದವರೊಂದಿಗೆ ಮಾತನಾಡಿ, ಮೊದಲು ತನಿಖೆಗೆ ಆದೇಶ ಮಾಡಲಿ. ಆಮೇಲೆ ನೋಡೋಣ. ಕೋವಿಡ್‌ ಹಗರಣದ ಕುರಿತು ನನಗೇನು ಗೊತ್ತಿಲ್ಲ ಎಂದರು.

ಸಂಸದ ಡಾ. ಸಿ ಎನ್ ಮಂಜುನಾಥ್‌ ಮಾತನಾಡಿದರು (ETV Bharat)

ಆ ಸಮತಿಯಲ್ಲಿ ಅನೇಕ ವೈದ್ಯರು, ತಜ್ಞರು ಇದ್ದಾರೆ. ಅನೇಕ ಅಧಿಕಾರಿಗಳು ಇದ್ದಾರೆ. ಇಲಾಖೆಗಳು ಇವೆ. ಅದು ಮೆಡಿಕಲ್‌ ಎಮರ್ಜೆನ್ಸಿ, ಗ್ಲೋಬಲ್ ಎಮರ್ಜೆನ್ಸಿ. ನನಗೆ ಯಾವುದೇ ಆಡಳಿತಾತ್ಮಕ ಹಾಗೂ ಆರ್ಥಿಕ ಪವರ್‌ ನೀಡಿರಲಿಲ್ಲ. ಇದರಲ್ಲಿ ಸ್ಪೆಷಲಿಸ್ಟ್‌ ಆಗಿ ನಾನೊಬ್ಬ ಸದಸ್ಯ ಅಷ್ಟೇ. ನಮ್ಮದು ಏನಿದ್ದರೂ ಸಲಹೆ ನೀಡುವುದು ಎಂದಿದ್ದಾರೆ.

ಚನ್ನಪಟ್ಟಣದಲ್ಲಿ ನಿಖಿಲ್‌ ಗೆಲುವು :ಈಗಾಗಲೇ ಚನ್ನಪಟ್ಟಣದಲ್ಲಿ ಚುನಾವಣೆ ಮುಗಿದಿದೆ. 23ನೇ ತಾರೀಖು ಮತ ಎಣಿಕೆ ಇದೆ. ನಮ್ಮ ಕಾರ್ಯಕರ್ತರ ಹಾಗೂ ಮತದಾರರ ಅಭಿಪ್ರಾಯವನ್ನ ನೋಡಿದಾಗ ನಿಖಿಲ್ ಅವರು ಗೆಲ್ಲುವ ವಿಶ್ವಾಸ ಜಾಸ್ತಿ ಇದೆ. ಚುನಾವಣೆಗೆ ಎರಡು - ಮೂರು ದಿನ ಇರುವಂತೆ ಆದ ಘಟನೆಗಳಿಂದ ಬಿಜೆಪಿ- ಜೆಡಿಎಸ್​ ಮೈತ್ರಿ ಅಭ್ಯರ್ಥಿ ಪರವಾಗಿ ಹೆಚ್ಚು ಒಲವು ಬಂತು ಎಂದು ಡಾ. ಮಂಜುನಾಥ್​ ತಿಳಿಸಿದರು.

ಇದನ್ನೂ ಓದಿ :ಕೋವಿಡ್ ನಿರ್ವಹಣೆಯಲ್ಲಿ ಹಣಕಾಸಿನ ಜವಾಬ್ದಾರಿ, ನಿಯಂತ್ರಣ ನನ್ನ ವ್ಯಾಪ್ತಿಗೆ ಬಂದಿಲ್ಲ: ಸಂಸದ ಸಿ.ಎನ್.ಮಂಜುನಾಥ್

Last Updated : Nov 18, 2024, 4:28 PM IST

ABOUT THE AUTHOR

...view details