ಬೆಂಗಳೂರು:ಕಾನ್ಸರ್ನಿಂದ ಸಾಫ್ಟ್ವೇರ್ ಕೆಲಸದಲ್ಲಿದ್ದ ಗಂಡನ ಅಕಾಲಿಕ ನಿಧನದ ನೋವು ಮತ್ತು ಆರ್ಥಿಕ ಸಂಕಷ್ಟದಿಂದ ಮಾನಸಿಕ ಖಿನ್ನತೆಗೆ ಒಳಗಾದ ಹೆಂಡತಿ, ಮಗನ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆ ಯಲಹಂಕದಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕದ ಆರ್ಎನ್ಜೆಡ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ರಮ್ಯಾ(40) ಮತ್ತು ಅವರ 12 ವರ್ಷದ ಮಗ ಆತ್ಮಹತ್ಯೆಗೆ ಮಾಡಿಕೊಂಡವರು.
19 ವರ್ಷದ ಮಗಳು ಪಿಜಿಯಲ್ಲಿದ್ದರು, ಜುಲೈ 9 ರಂದು ಮಗಳ ಜೊತೆ ಫೋನ್ನಲ್ಲಿ ಮಾತನಾಡಿದ ರಮ್ಯಾ ಅನಂತರ ಆತ್ಮಹತ್ಯೆ ಶರಣಾಗಿದ್ದಾರೆ. ನಿನ್ನೆ ಮಗಳು ಪಿಜಿಯಿಂದ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ. ಎಷ್ಟೊತ್ತಾದರೂ ಬಾಗಿಲು ತೆರೆಯಲಿಲ್ಲ, ಆಗ ಇನ್ನೊಂದು ಕೀಯಿಂದ ಮನೆಯ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಎಂದು ಡಿಸಿಪಿ ವಿ.ಜೆ. ಸಜೀತ್ ತಿಳಿಸಿದ್ದಾರೆ.
ಮೊದಲಿಗೆ ಮಗ ಭಾರ್ಗವ್ ನೇಣಿ ಬೀಗಿದ ತಾಯಿ, ಅವನು ಸತ್ತ ನಂತರ ಬೆಡ್ ಮೇಲೆ ಶವವನ್ನ ಮಲಗಿಸಿದ್ದಾರೆ. ಆನಂತರ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾಯಿ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.