ಕರ್ನಾಟಕ

karnataka

ETV Bharat / state

'ನಮ್ಮೂರ ಮಸೀದಿ ನೋಡ ಬನ್ನಿ': ದಾವಣಗೆರೆಯಲ್ಲಿ ಭಾವೈಕ್ಯತೆಯ ಸಂದೇಶ ರವಾನೆ - Mosque Darshan - MOSQUE DARSHAN

ದಾವಣಗೆರೆಯಲ್ಲಿ ಮಸೀದಿ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸುವ ಮೂಲಕ ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂದೇಶ ಸಾರಲಾಯಿತು.

ದಾವಣಗೆರೆಯಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮ
ದಾವಣಗೆರೆಯಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮ (ETV Bharat)

By ETV Bharat Karnataka Team

Published : Sep 16, 2024, 1:36 PM IST

ದಾವಣಗೆರೆಯಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮ (ETV Bharat)

ದಾವಣಗೆರೆ:'ನಮ್ಮೂರ ಮಸೀದಿ ನೋಡ ಬನ್ನಿ' ಕಾರ್ಯಕ್ರಮದಲ್ಲಿ ಎಲ್ಲ ಧರ್ಮದವರು ಭಾಗಿಯಾಗುವ ಮೂಲಕ ಸಮಾಜದಲ್ಲಿ ಭಾವೈಕ್ಯತೆ, ಸೌಹಾರ್ದತೆ ಸಾರಿದ್ದಾರೆ. ವಿಶೇಷವೆಂದ್ರೆ ಅನ್ಯ ಧರ್ಮೀಯರಿಗೆ ಮಸೀದಿ ದರ್ಶನ ಮಾಡಿಸುವ ಜೊತೆಗೆ ಕನ್ನಡದಲ್ಲಿ ಕುರಾನ್, ನಮಾಜ್, ಅಝಾನ್ ಬಗ್ಗೆ ಆಯೋಜಕರು ಮನವರಿಕೆ ಮಾಡಿಕೊಟ್ಟಿದ್ದಾರೆ.

ದಾವಣಗೆರೆ ನಗರದ ಮರ್ಕಜ್ ಎ ಮಹಮ್ಮದೀಯ ಮಸೀದಿ ದರ್ಶನಕ್ಕೆ ಇತ್ತೀಚೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಪಾರ ಹಿಂದೂ ಮತ್ತು ಕ್ರೈಸ್ತ್ ಬಾಂಧವರು ಮಸೀದಿಗೆ ಭೇಟಿ ನೀಡಿ, ಪ್ರಾರ್ಥನೆ ಮಾಡುವ ಬಗೆ ಕಣ್ತುಂಬಿಕೊಂಡರು. ಜೊತೆಗೆ ನಮಾಜ್ ಎಂದರೇ ಏನೂ, ಮಸೀದಿಯಲ್ಲಿ ದಿನ ನಿತ್ಯ ಐದು ಹೊತ್ತು ನಮಾಜ್ (ಪ್ರಾರ್ಥನೆ) ಹೇಗೆ ಮತ್ತು ಏಕೆ ಮಾಡುತ್ತಾರೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಉತ್ತರ ನೀಡಲಾಯಿತು.

ಕನ್ನಡದಲ್ಲೇ ಪ್ರಾರ್ಥನೆ, ಪ್ರವಚನ!ಮಸೀದಿಗಳಲ್ಲಿ ಅರೇಬಿಕ್ ಭಾಷೆ ಬದಲಿಗೆ ಕನ್ನಡದಲ್ಲೇ ಪ್ರಾರ್ಥನೆ, ಪ್ರವಚನ ಮಾಡಿದ್ದು ವಿಶೇಷವಾಗಿತ್ತು. ಹಿಂದೂ, ಕ್ರಿಶ್ಚಿಯನ್ ಧರ್ಮೀಯರು ಪ್ರತಿಯೊಂದು ಕನ್ನಡದಲ್ಲೇ ಮಾಹಿತಿ ಪಡೆದರು. ಅಲ್ಲದೆ ಮಸೀದಿಯಲ್ಲಿ ಬೇರೆ ಧರ್ಮೀಯರಿಗೆ ಅವಕಾಶ ಇಲ್ಲ ಎಂಬ ಭಾವನೆಯನ್ನು ದೂರ ಮಾಡಿ, ಎಲ್ಲರಿಗೂ ಮುಕ್ತ ಎಂಬ ಸಂದೇಶ ರವಾನಿಸಲಾಯಿತು. ಅಲ್ಲದೆ ಮಹಿಳೆಯರಿಗೂ ಪ್ರವೇಶ ಕಲ್ಪಿಸಿದ್ದು ವಿಶೇಷವಾಗಿತ್ತು.

"ನಮ್ಮ ದೇಶ ಜಾತ್ಯತೀತ ದೇಶ ಆಗಿದ್ದರಿಂದ ಎಲ್ಲಾ ಆಚಾರ ವಿಚಾರಗಳನ್ನು ನೋಡಬಹುದಾಗಿದೆ. ಅದರಂತೆ ಬೇರೆ ಧರ್ಮದವರಿಗೆ ಮಸೀದಿ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಮಸೀದಿಯಲ್ಲಿ ಯಾವ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಲಾವುತ್ತದೆ. ಕುರಾನ್, ಮಸೀದಿ, ಪ್ರಾರ್ಥನೆ ಬಗ್ಗೆ ಕನ್ನಡದಲ್ಲೇ ಮನವರಿಕೆ ಮಾಡಲಾಗಿದೆ" ಎಂದು ಆಯೋಜಕರು ಮೊಹಮ್ಮದ್ ಹಯಾತ್ ತಿಳಿಸಿದರು.

ನಾವು ಮೊದಲು ಮಾನವರು, ದೇಶದಲ್ಲಿ ದ್ವೇಷ ಹಂಚುವ ಬದಲು ಪ್ರೀತಿ ಹಂಚಿ...!

ಪ್ರೀತಿ ಹಂಚುವ, ಕಷ್ಟ ಸುಖಗಳಿಗೆ ಧ್ವನಿ ಆಗುವಂತ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಈ ಮಸೀದಿ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಾಕಷ್ಟು ಹಿಂಧೂ ಬಾಂಧವರು ಮಸೀದಿಯ ದರ್ಶನ ಮಾಡಿದರು. ಇದೇ ಮೊದಲ ಬಾರಿಗೆ ಮಸೀದಿ ಒಳಗೆ ಆಗಮಿಸಿದ್ದ ಹಿಂದೂಗಳು ಸಂತಸ ವ್ಯಕ್ತಪಡಿಸಿದರು. ಇದೊಂದು ವಿನೂತನ ಪ್ರಯತ್ನ, ಮಂದಿರ,‌ ಮಸೀದಿ ಯಾರ ಆಸ್ತಿಯೂ ಅಲ್ಲ, ಎಲ್ಲರಿಗೂ ಸೇರಿದ್ದಾಗಿದೆ. ಮಸೀದಿ‌ಗೆ ಭೇಟಿ ನೀಡಿದ್ದು ಹೊಸ ಅನುಭವ. ಇಲ್ಲಿ ನೀಡಿದ ಮಾಹಿತಿ ಅರ್ಥಪೂರ್ಣವಾಗಿತ್ತು. ಮಹಿಳೆಯರೆಲ್ಲರಿಗೂ ಮಸೀದಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.

ಇದನ್ನೂ ಓದಿ: ಭಾವೈಕ್ಯತೆ: ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್ ಮಿಲಾದ್ ಸಮಿತಿಗೆ ಹಿಂದೂಗಳೇ ಅಧ್ಯಕ್ಷರು, ಉಪಾಧ್ಯಕ್ಷರು - Hindu Muslim Harmony

ABOUT THE AUTHOR

...view details