ಹಾವೇರಿ :ಹಾನಗಲ್ ನೈತಿಕ ಪೊಲೀಸ್ಗಿರಿ ಹಾಗೂ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ವ್ಯಕ್ತಿಯೊಬ್ಬರ ಜೊತೆ ಯುವತಿ ಹೋಗುವಾಗ ಯುವಕರ ಗುಂಪೊಂದು ತಡೆದು ಹಲ್ಲೆ ನಡೆಸಿದೆ. ಈ ಬಗ್ಗೆ ಯುವತಿ ನೀಡಿರುವ ದೂರಿ ಮೇರೆಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹೋದ್ಯೋಗಿಯೊಂದಿಗೆ ಕೆಲಸ ಮುಗಿಸಿ ಯುವತಿ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಯುವಕರ ಗುಂಪು ತಡೆದು ನೈತಿಕ ಪೊಲೀಸ್ಗಿರಿ ನಡೆಸಿದೆ. ಸಾರ್ವಜನಿಕ ಸ್ಥಳದಲ್ಲಿ ಎಳೆದಾಡಿ ಕಪಾಳ ಮೋಕ್ಷ ಮಾಡಿ ಅವಮಾನ ಮಾಡಿದ್ದಾರೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಸಂತ್ರಸ್ತ ಯುವತಿ ಪ್ರಕರಣ ದಾಖಲಿಸಿದ್ದಾರೆ.