ಕರ್ನಾಟಕ

karnataka

ETV Bharat / state

ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದರಿ ವಿಮಾನಗಳ ಏರ್​​ ಶೋ - MODEL AIRCRAFT AIR SHOW

ಅಡ್ಯಾರ್​ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿ ವಿಮಾನಗಳ ಏರ್​​ ಶೋ ನಡೆದಿದೆ.

ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದರಿ ವಿಮಾನಗಳ ಏರ್​​ ಶೋ
ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದರಿ ವಿಮಾನಗಳ ಏರ್​​ ಶೋ (ETV Bharat)

By ETV Bharat Karnataka Team

Published : Nov 9, 2024, 2:47 PM IST

ಮಂಗಳೂರು:ಮಂಗಳೂರಿನ ಅಡ್ಯಾರ್​ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬಾನಂಗಳದಲ್ಲಿ ವಿಶೇಷ ಹಕ್ಕಿಗಳ ಹಾರಾಟ ನಡೆಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಮಾನಗಳ ಮಾದರಿಗಳಿಂದ ಏರ್​​ ಶೋ ಗಮನ ಸೆಳೆಯಿತು.

ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನೇತ್ರಾವತಿ ನದಿ ತೀರದಲ್ಲಿ ಏರ್ ಶೋ ನಡೆಯಿತು. ಇಂದು ಬೆಳಗ್ಗೆ 9.30 ರಿಂದ 10.30 ವರೆಗೆ ನಡೆದ ಏರ್ ಶೋ ನಲ್ಲಿ 13 ವಿಮಾನಗಳ ಹಾರಾಟ ನಡೆಯಿತು. ಇದರಲ್ಲಿ ವಿಮಾನಗಳು, ಹೆಲಿಕಾಪ್ಟರ್​ಗಳ ಮಾಡೆಲ್​ಗಳು ಹಾರಾಟ ನಡೆಸಿದವು. ಇವುಗಳಲ್ಲಿ 8 ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ ವಿಮಾನದ ಮಾದರಿಗಳಾಗಿದ್ದವು.

ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದರಿ ವಿಮಾನಗಳ ಏರ್​​ ಶೋ (ETV Bharat)

ವಿಮಾನ‌ ಮತ್ತು ಹೆಲಿಕಾಪ್ಟರ್​ಗಳ ಮಾಡೆಲ್​ಗಳ ಹಾರಾಟದಲ್ಲಿ ಇಂಜಿನಿಯರಿಂಗ್​ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಯಿತು. ಬಾನಂಗಳದಲ್ಲಿ ವಿಮಾನದ ಮಾದರಿಗಳು ವಿವಿಧ ಭಂಗಿಯಲ್ಲಿ ಪ್ರದರ್ಶನ ನೀಡಿದವು. ವಿಮಾನ ಆಕಾಶಕ್ಕೆ ಮುಖ ಮಾಡಿ ನೇರ ನಿಲ್ಲುವುದು, ಹಾರಡುತ್ತಲೇ ಪಲ್ಟಿ ಹೊಡೆಯುವುದು ಆಕರ್ಷಣೀಯವಾಗಿತ್ತು.

ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ರಾವ್ ಮಾತನಾಡಿ "ನಾವು ಸೈನರ್ಜಿಯಾ 2024 ಅನ್ನು ಆಯೋಜಿಸಿದ್ದೇವೆ, ಇದು ಸೈನರ್ಜಿಯಾ ಎರಡನೇ ಆವೃತ್ತಿಯಾಗಿದೆ. ಇದರಲ್ಲಿ ಮೂರು ಕಾರ್ಯಕ್ರಮಗಳನ್ನು ಸೇರಿಸಲಾಗಿದೆ. ಒಂದೇ SSTH, ಮತ್ತೊಂದು ರೋಬೋಟಿಕ್ಸ್​​ ಕ್ಲಬ್​ ಮತ್ತು ಇನ್ನೊಂದು SOSC. ಇವು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ".

"ಮಾರ್ಗದರ್ಶನ ಮತ್ತು ಯೋಜನೆ ರೂಪಿಸುವಿಕೆ ಇಂದಿನ ಪ್ರದರ್ಶನ ಮತ್ತು ಸ್ಪರ್ಧೆಯ ಭಾಗವಾಗಿದೆ. ನಾವು ಚಾಲೆಂಜರ್ಸ್ ಎಂಬ ಕಂಪನಿಯನ್ನು ಹೊಂದಿದ್ದೇವೆ, ನಾವು ಅದರಿಂದ ಏರ್ ಶೋ ಪ್ರದರ್ಶನಗಳನ್ನು ನಡೆಸಿದ್ದೇವೆ. ಏರ್ ಶೋ ಪ್ರದರ್ಶನದಲ್ಲಿ ನಾವು ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ನೋಡಿದ್ದೇವೆ. ಹೆಚ್ಚಿನ ವಿಮಾನಗಳನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಅವರೆ ಇದನ್ನು ತಯಾರಿಸಿದರು. ನಾವು ಇದನ್ನು ಮಾಡಲು ಕಾರಣ ಎಂದರೆ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಮತ್ತು ಅವರಿಗೆ ಇಲ್ಲಿ ಕೆಲಸ ಮಾಡಲು ಸಹಾಯ ಮಾಡುವುದು. ಇಂದು ಹಾರಾಟ ನಡೆಸಿದ ಶೇಕಡಾ 60 ವಿಮಾನಗಳು ಸಹ್ಯಾದ್ರಿ ಕಾಲೇಜಿನಿಂದ ಬಂದಿವೆ" ಎಂದರು.

ಸಹ್ಯಾದ್ರಿ ಕಾಲೇಜಿನ ಅಂತಿಮ‌ ವರ್ಷದ ವಿದ್ಯಾರ್ಥಿ ತೇಜಸ್ ನಾಯಕ್ ಅವರು, "ನಾನು ಸೈನರ್ಜಿಯಾ 2024 ರ ವಿದ್ಯಾರ್ಥಿ ಸಂಯೋಜಕ. ಏರ್‌ಶೋ ಮೂರು ವರ್ಷದಿಂದಲೂ ನಡೆಯುತ್ತಿದೆ. ನಾವು ಬೆಂಗಳೂರಿನಿಂದ ಅಭಯ ಪವಾರ್ ಮತ್ತು ಅವರ ತಂಡವನ್ನು ತರಿಸಿದ್ದೇವೆ. ಅಭಯ ಪವಾರ್ ಅವರ ಪುತ್ರ ಆದಿತ್ಯ ಪವಾರ್ 5 ವರ್ಷ ವಯಸ್ಸಿನಲ್ಲಿಯೇ RC ಅನ್ನು ಪ್ರಾರಂಭಿಸಿದರು. ಅವರು 5 ವರ್ಷದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯನ್ನು ಗೆದ್ದಿದ್ದರು. ಅವರು ನಮ್ಮ ಚಾಲೆಂಜರ್ಸ್ ಕ್ಲಬ್‌ನೊಂದಿಗಿದ್ದು ಸಹಾಯ ಮಾಡುತ್ತಿದ್ದಾರೆ. ವಿಮಾನಗಳನ್ನು ಹಾರಿಸುವುದು ತುಂಬಾ ಕಷ್ಟ. ಏರೋಬ್ಯಾಟಿಕ್ ಆಕಾರಗಳನ್ನು ಸಹ ಮಾಡುವುದು ತುಂಬಾ ಕಷ್ಟ. ವಿದ್ಯಾರ್ಥಿಗಳು ಮೊದಲ ವರ್ಷದಿಂದಲೇ ಇದನ್ನು ಮಾಡುತ್ತಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಉಡುಪಿ: ಭತ್ತದ ಕಟಾವು ಚುರುಕು-ದ್ವಿದಳ ಧಾನ್ಯ, ಕಲ್ಲಂಗಡಿ, ತರಕಾರಿ ಬಿತ್ತನೆಗೆ ಸಿದ್ಧತೆ

ABOUT THE AUTHOR

...view details