ಕರ್ನಾಟಕ

karnataka

ETV Bharat / state

ಪರಿಷತ್ ಚುನಾವಣೆ: ಕಾಂಗ್ರೆಸ್‌ನ 7 ಅಭ್ಯರ್ಥಿಗಳ ಆಸ್ತಿ ವಿವರ ಹೀಗಿದೆ - Congress Candidates Asset Details - CONGRESS CANDIDATES ASSET DETAILS

ವಿಧಾನಸಭೆಯಿಂದ ಪರಿಷತ್ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್​ನ 7 ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ.

ಕಾಂಗ್ರೆಸ್ ಏಳು ಅಭ್ಯರ್ಥಿಗಳ ಆಸ್ತಿ ವಿವರ
ಕಾಂಗ್ರೆಸ್ ಏಳು ಅಭ್ಯರ್ಥಿಗಳ ಆಸ್ತಿ ವಿವರ (ETV Bharat)

By ETV Bharat Karnataka Team

Published : Jun 3, 2024, 10:58 PM IST

ಬೆಂಗಳೂರು: ವಿಧಾನಸಭೆಯಿಂದ ಪರಿಷತ್ ಚುನಾವಣೆಗಾಗಿ ಕಾಂಗ್ರೆಸ್​ನ 7 ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಏಳು ಅಭ್ಯರ್ಥಿಗಳು ಕೋಟ್ಯದಿಪತಿಗಳಾಗಿದ್ದು, ಎಷ್ಟು ಆಸ್ತಿಯ ಒಡೆಯರು ಎಂಬ ವರದಿ ಇಲ್ಲಿದೆ.

ವಿಧಾನಸಭೆಯಿಂದ ಪರಿಷತ್​ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್​ನ ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು, ಕೆ.ಗೋವಿಂದ ರಾಜು, ವಸಂತ ಕುಮಾರ್, ಮಾಜಿ ಎಂಎಲ್‌ಸಿ ಐವಾನ್ ಡಿಸೋಜಾ, ಶಿವಮೊಗ್ಗದ ಬಲ್ಕೀಸ್ ಬಾನು, ಜಗದೇವ್ ಗುತ್ತೇದಾರ್ ನಾಮಪತ್ರ ಸಲ್ಲಿಕೆ ಮಾಡಿದರು.

ಯತೀಂದ್ರ ಸಿದ್ದರಾಮಯ್ಯ:ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಒಟ್ಟು 31.88 ಕೋಟಿ ರೂ.‌ ಆಸ್ತಿ ಒಡೆಯರಾಗಿದ್ದಾರೆ. 9.23 ಕೋಟಿ ರೂ. ಚರ ಆಸ್ತಿ ಹೊಂದಿದ್ದರೆ, ಸ್ಥಿರ ಆಸ್ತಿ 22.65 ಕೋಟಿ ರೂ. ಹೊಂದಿದ್ದಾರೆ. ಯತೀಂದ್ರ 1.51 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರು ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಯತೀಂದ್ರ ಸುಮಾರು 10.39 ಕೋಟಿ ಹೊಣೆಗಾರಿಕೆ ಹೊಂದಿದ್ದಾರೆ. ಯತೀಂದ್ರ ವಿರುದ್ಧ ಕೋವಿಡ್ ಸಮಯದಲ್ಲಿ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ್ದರ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.

ಕೆ.ಗೋವಿಂದರಾಜ್:ಕೆ.ಗೋವಿಂದರಾಜ್ ಒಟ್ಟು 4.08 ಆಸ್ತಿಯ ಒಡೆಯ. ಅವರ ಪತ್ನಿ ಸುಮಾರು 33.55 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಸಮಾರು 1.47 ಕೋಟಿ ರೂ.‌ ಹೊಣೆಗಾರಿಕೆ ಹೊಂದಿದ್ದಾರೆ. ಗೋವಿಂದರಾಜ್ ಮೇಲೆ ಯಾವುದೇ ಮೊಕದ್ದಮೆಗಳು ಇಲ್ಲ.

ಎನ್.ಎಸ್.ಬೋಸರಾಜು:ಸಚಿವ ಬೋಸರಾಜು ಒಟ್ಟು 20.36 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಅವರ ಪತ್ನಿ 4.88 ಕೋಟಿ ರೂ. ಒಟ್ಟು ಆಸ್ತಿ ಹೊಂದಿದ್ದಾರೆ. ಸುಮಾರು 1.06 ಕೋಟಿ ರೂ. ಹೊಣೆಗಾರಿಕೆ ಹೊಂದಿದ್ದಾರೆ. ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿಲ್ಲ.

ಎ.ವಸಂತ ಕುಮಾರ್:ಎ.ವಸಂತ ಕುಮಾರ್ ಒಟ್ಟು 4.5 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಹೆಸರಲ್ಲಿ 1.74 ಕೋಟಿ ರೂ.‌ ಆಸ್ತಿ ಇದೆ. ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿಲ್ಲ.

ಐವಾನ್ ಡಿಸೋಜಾ:ಐವಾನ್ ಡಿಸೋಜಾ ಒಟ್ಟು 10.12 ಕೋಟಿ ರೂ. ಆಸ್ತಿ ಒಡೆಯರಾಗಿದ್ದಾರೆ. ಅವರ ಪತ್ನಿ ಹೆಸರಲ್ಲಿ ಸುಮಾರು 92 ಲಕ್ಷ ರೂ. ಆಸ್ತಿ ಹೊಂದಿದ್ದಾರೆ. ಸುಮಾರು 23 ಲಕ್ಷ ರೂ. ಹೊಣೆಗಾರಿಕೆ ಹೊಂದಿದ್ದಾರೆ. ಅವರ ವಿರುದ್ದ 1 ಮೊಕದ್ದಮೆ ದಾಖಲಾಗಿದೆ.

ಬಲ್ಕೀಸ್ ಬಾನು:ಬಲ್ಕೀಸ್ ಬಾನು ಒಟ್ಟು 31.86 ಲಕ್ಷ ರೂ. ಚರಾಸ್ತಿ ಹೊಂದಿದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಅವರ ಪತಿಯ ಹೆಸರಲ್ಲಿ 80 ಲಕ್ಷ ರೂ. ಆಸ್ತಿ ಇದೆ. ಬಲ್ಕೀಸ್ ಬಾನು ಯಾವುದೇ ಸಾಲ ಹೊಂದಿಲ್ಲ.

ಜಗದೇವ್ ಗುತ್ತೇದಾರ್:ಜಗ​ದೇವ್​ ಗುತ್ತೇದಾರ್ ಒಟ್ಟು 2.76 ಕೋಟಿ ರೂ.‌ ಆಸ್ತಿ ಒಡೆಯರಾಗಿದ್ದಾರೆ. ಪತ್ನಿ ಸುಮಾರು 8 ಲಕ್ಷದ ಆಸ್ತಿ ಹೊಂದಿದ್ದಾರೆ. ಮಗನ ಹೆಸರಲ್ಲಿ ಸುಮಾರು 1.73 ಕೋಟಿ ರೂ. ಆಸ್ತಿ ಇದೆ. ಸುಮಾರು 34.08 ಲಕ್ಷ ರೂ. ಹೊಣೆಗಾರಿಕೆ ಹೊಂದಿದ್ದಾರೆ.

ಇದನ್ನೂ ಓದಿ:ವಿಧಾನಸಭೆಯಿಂದ ಪರಿಷತ್ ಚುನಾವಣೆ: 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ - Council Election

ABOUT THE AUTHOR

...view details