ಬೆಂಗಳೂರು: ಕಾಂಗ್ರೆಸ್ ಪಕ್ಷದವರಿಗೆ ನಕಲಿ ಗಾಂಧಿಗಳು ಅಂತ ಬಿಜೆಪಿಯವರು ಹೇಳ್ತಾರೆ. ಇವರಿಗೆ ನಿಜವಾದ ಗಾಂಧಿ ಮೇಲೆ ಗೌರವ ಇದ್ದರೆ ನಾಥುರಾಮ್ ಗೋಡ್ಸೆಯನ್ನು ಮೊದಲ ಭಯೋತ್ಪಾದಕ ಎಂದು ಘೋಷಣೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು.
ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿಯವರು ನಕಲಿ ದೇಶ ಭಕ್ತರು. ಯಾವುದೇ ಒಬ್ಬ ಸಂಘ ಪರಿವಾರದವನೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಪ್ರಲ್ಹಾದ್ ಜೋಶಿ ಅವರಿಗೆ ವಯಸ್ಸಾಗಿದೆ. ಅವರು ಇಂಡಿಯಾ ಗೇಟ್ಗೆ ಹೋಗಿ ನೋಡಲಿ, ಇಂಡಿಯಾ ಗೇಟ್ನಲ್ಲಿ 57 ಸಾವಿರ ಹುತಾತ್ಮರ ಹೆಸರಿನಲ್ಲಿ 37 ಸಾವಿರ ಮಂದಿ ಅಲ್ಪಸಂಖ್ಯಾತರ ಹೆಸರೇ ಇದೆ. 17 ಸಾವಿರ ಹಿಂದೂಗಳ ಹೆಸರಿದೆ ಎಂದರು.
ನಕಲಿ ದೇಶಭಕ್ತರು ಬೇರೆಯವರ ಬಗ್ಗೆ ಮಾತಾಡೋದು ಬೇಡ. ಕೇಂದ್ರ ಸಚಿವರಾಗಿ ಜೋಶಿಯವರ ಕೈಯಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸಲು ಸಾಧ್ಯ ಆಗುತ್ತಿಲ್ಲ. ಸುಳ್ಳುಗಳನ್ನು ಹಬ್ಬಿಸಿ ವೋಟು ಪಡೆಯಲು ಯತ್ನಿಸಿದರು. ಹುಬ್ಬಳ್ಳಿಗೆ ಯಾವುದಾದರೂ ಒಂದು ಮಲ್ಟಿ ನ್ಯಾಷನಲ್ ಕಂಪನಿ ಬಂದಿದೆಯಾ ಎಂದು ಪ್ರಶ್ನಿಸಿದರು.
ಜೋಶಿಯವರು ಹುಬ್ಬಳ್ಳಿ ಧಾರವಾಡಕ್ಕೆ ಯಾವುದಾದರೂ ಒಂದು ಕಾರ್ಪೊರೇಟ್ ಸೆಕ್ಟರ್ ಕಂಪನಿ ತಂದಿದ್ದಾರಾ?. ಕಿತ್ತೂರು ಚೆನ್ನಮ್ಮನ ಉತ್ಸವ ಕೂಡ ಮಾಡೋದಕ್ಕೆ ಇವರ ಕೈಯಲ್ಲಿ ಸಾಧ್ಯ ಆಗಿಲ್ಲ. ದೇಶದ ಯೋಗ್ಯತೆ ಪಂಚಾಂಗದಿಂದ ನಡೆಯುತ್ತೆ ಅಂತ ಜೋಶಿ ಭಾವಿಸಿದ್ದಾರೆ. ದೇಶಕ್ಕೆ ಸಂವಿಧಾನ ಇದೆ, ಈಗ ಪಂಚಾಂಗ ನಡೆಯೋದಿಲ್ಲ ಎಂಬುದನ್ನು ಜೋಶಿ ತಿಳಿದುಕೊಳ್ಳಲಿ. ಡೋಂಗಿ ಆದಿತ್ಯನಾಥ ಪ್ರಕರಣಗಳನ್ನು ಹೇಗೆ ವಾಪಸ್ ತೆಗೆದುಕೊಂಡರು ಎಂದು ಉತ್ತರ ನೀಡಲಿ ಎಂದು ಕಿಡಿಕಾರಿದರು.
ಇದನ್ನೂ ಓದಿ:ಪ್ರಲ್ಹಾದ್ ಜೋಶಿಯವರೇ ಭಯೋತ್ಪಾದಕರು: ಸಿಎಂ ಸಿದ್ದರಾಮಯ್ಯ