ಬೆಂಗಳೂರು: ಯಾವುದೇ ಅನುಭವವಿಲ್ಲದೇ ಹುದ್ದೆಯನ್ನು ಸೃಷ್ಟಿಸಲು ಆಗುತ್ತಾ? ಎಂದು ಶಾಸಕಿ ರೂಪಕಲಾ ಶಶಿಧರ್ ಕೇಳಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ತಮ್ಮ ಪತಿಗೆ ರಾಜಕೀಯ ಪ್ರಭಾವ ಬಳಸಿ ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ 2 ಹುದ್ದೆ ಸೃಷ್ಟಿಸಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಯಾವುದೇ ಅನುಭವವಿಲ್ಲದೇ ಈ ರೀತಿ ಹುದ್ದೆ ಸೃಷ್ಟಿ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.