ಬೆಂಗಳೂರು: ನಿನ್ನೆ ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದವರ ಸದಸ್ಯರ ಹೆಸರನ್ನು ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ, ವಿಧಾನಸಭೆಯ ಸಭಾಂಗಣಕ್ಕೆ ಬರಲು ಶಾಸಕರಿಗೆ ಅವಕಾಶವಿದೆ. ಆದರೆ, ಹಿರಿಯ ಶಾಸಕರು ಹಾಗೂ ಸಚಿವರು ಆಪ್ತ ಸಹಾಯಕರನ್ನು ಕರೆತರುತ್ತಿದ್ದಾರೆ. ಇದರಿಂದ ಶಾಸಕರಿಗೆ ಕೂರಲು ಜಾಗ ಇಲ್ಲವಾಗಿದೆ. ವಿಧಾನಸಭೆಯ ಘನತೆಯನ್ನು ನಾವು ಕಾಪಾಡಬೇಕು" ಎಂದು ಹೇಳಿದರು.
''ಹಿರಿಯ ಸಚಿವರೊಬ್ಬರು ತಮ್ಮ ಬಳಿ ಬಂದು, ಇದೇನು ಮೊಗಸಾಲೆಯೇ ಅಥವಾ ಹೋಟೆಲ್ ಆಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಶಾಸಕರು ಹಿರಿಯರಿದ್ದರೆ ಒಬ್ಬರು ಆಪ್ತ ಸಹಾಯಕರನ್ನು ಕರೆ ತರಲು ಅವಕಾಶ ಇದೆ. ಆದರೆ, ತಮ್ಮ ಆಪ್ತ ಸಹಾಯಕರನ್ನು ಒಳಗೆ ಕರೆ ತರಲು ಮಾರ್ಷಲ್‌ಗಳ ಜೊತೆ ಗಲಾಟೆ ಮಾಡಬೇಡಿ. ನಾವು ಹೇಳಿದ್ದನ್ನು ಪಾಲನೆ ಮಾಡಲು ಮಾರ್ಷಲ್ಗಳಿದ್ದಾರೆ. ಇನ್ನು ಮುಂದೆ ಶಾಸಕರ ಹಾಗೂ ಸಚಿವರ ಆಪ್ತ ಸಹಾಯಕರಿಗೆ ಮೊಗಸಾಲೆಯ ಪ್ರವೇಶ ಇಲ್ಲ'' ಎಂದು ಸ್ಪಷ್ಟಪಡಿಸಿದರು.
''ಖುಷಿಯ ವಿಚಾರ ಏನೆಂದರೆ ಶಾಸಕರಿಗೆ ಸದನಕ್ಕೆ ಬೇಗ ಬರಲು ಬೆಳಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟಕ್ಕೆ ದೂರ ಹೋಗಿ ಬರಲು ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಇಲ್ಲಿಯೇ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಊಟ ಎಲ್ಲಾ ಚೆನ್ನಾಗಿತ್ತು. ಶಾಸಕರ ಭವನಕ್ಕೆ ಹೋಗಿ ನಿದ್ದೆ ಮಾಡಿ ಬರುತ್ತೇನೆ ಎಂದು ಹೋದ ಶಾಸಕರು ಅಲ್ಲಿಯೇ ಮಲಗಿ ಬಿಡುತ್ತಾರೆ. ಕಲಾಪಕ್ಕೆ ಬರುವುದೇ ಇಲ್ಲ. ಅದಕ್ಕಾಗಿ ಇಲ್ಲೇ ಪಕ್ಕದಲ್ಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ. ನಿದ್ದೆ ಬಂದರೆ ಅದರಲ್ಲಿ ಕುಳಿತು ವಿಶ್ರಾಂತಿ ಪಡೆಯಿರಿ'' ಎಂದು ಹೇಳಿದರು.
ನಿದ್ದೆ ಮಾಡಲು ಕುರ್ಚಿ ವ್ಯವಸ್ಥೆ- ಖಾದರ್: "ಕುರ್ಚಿಯ ಮೇಲೆ ಮಲಗಿ ಬಿಡುತ್ತಾರೆ, ಕಲಾಪಕ್ಕೆ ಬರುವುದಿಲ್ಲ ಎಂದು ಶಾಸಕರೊಬ್ಬರು ಹೇಳಿದಾಗ, ಇಲ್ಲೇ ಇದ್ದರೆ ತುರ್ತು ಸಂದರ್ಭದಲ್ಲಿ ಎಬ್ಬಿಸಿಕೊಂಡು ಬರಬಹುದು. ಶಾಸಕರ ಭವನಕ್ಕೆ ಹೋದವರು ನಿದ್ದೆ ಮಾಡಿ ಬಿಟ್ಟರೆ ಬರುವುದೇ ಇಲ್ಲ. ಅದಕ್ಕಾಗಿ ನಿದ್ದೆ ಮಾಡಲು ಇಲ್ಲಿಯೇ ಕುರ್ಚಿಯ ವ್ಯವಸ್ಥೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯ ಹಾಗೂ ಸಹಕಾರ ಪಡೆದು ಮುಂದೆ ಮತ್ತಷ್ಟು ಸುಧಾರಣೆ ಮಾಡುತ್ತೇವೆ'' ಎಂದು ಯು.ಟಿ.ಖಾದರ್ ತಿಳಿಸಿದರು.
ಇದನ್ನೂ ಓದಿ:ಬೀದರ್–ಬೆಂಗಳೂರು ವಿಮಾನ ಸೇವೆ ಪುನಾರಂಭ: 2 ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚನೆ - Bidar Bengaluru Flight