ಬೆಂಗಳೂರು:ಮಹಿಳೆಯೊಬ್ಬರನ್ನ ಹತ್ಯೆಗೈದು ಚಿನ್ನಾಭರಣ, ಫೋನ್ ಹಾಗೂ ಕಾರಿನೊಂದಿಗೆ ಹಂತಕರು ಪರಾರಿಯಾಗಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ನಗರದಲ್ಲಿ ನಡೆದಿದೆ. ಶೋಭಾ (48) ಕೊಲೆಯಾದ ಮಹಿಳೆ. ಮೃತಳ ಮಗಳು ಹರ್ಷಿತಾಳಿಗೆ ಏಪ್ರಿಲ್ 4ರಂದು ಮದುವೆಯಾಗಿತ್ತು. ತಾಯಿ ಮನೆಗೆ ಬಂದಿದ್ದ ಹರ್ಷಿತಾ ಗುರುವಾರವಷ್ಟೇ ಜೆ.ಪಿ. ನಗರದಲ್ಲಿರುವ ತನ್ನ ಗಂಡನ ಮನೆಗೆ ತೆರಳಿದ್ದರು.
ಶುಕ್ರವಾರ ಹರ್ಷಿತಾ, ತಾಯಿಗೆ ಎಷ್ಟು ಬಾರಿ ಫೋನ್ ಮಾಡಿದರೂ ಶೋಭಾ ಸ್ವೀಕರಿಸಿರಲಿಲ್ಲ. ನಂತರ ಅವರು ತನ್ನ ಅಕ್ಕ ಹಾಗೂ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡು, ಮನೆಗೆ ಬಂದು ನೋಡಿದಾಗ ಬೆಡ್ ರೂಮ್ನಲ್ಲಿ ಶೋಭಾ ಮೃತದೇಹ ಪತ್ತೆಯಾಗಿದೆ. ಜೊತೆಗೆ ಆಕೆಯ ಚಿನ್ನದ ತಾಳಿ, ಸರ, ಮೊಬೈಲ್ ಫೋನ್ ಹಾಗೂ ಕಾರು ನಾಪತ್ತೆಯಾಗಿದೆ.