ಕರ್ನಾಟಕ

karnataka

ETV Bharat / state

ಬೆಂಗಳೂರು: 55 ವರ್ಷದ ಮಹಿಳೆ ಮೇಲೆ ಆತ್ಯಾಚಾರವೆಸಗಿ ಹತ್ಯೆ: 19 ವರ್ಷದ ಯುವಕನ ಬಂಧನ - RAPE AND MURDER CASE - RAPE AND MURDER CASE

ಮಹಿಳೆ ಮೇಲೆ ಯುವಕನೊಬ್ಬ ಆತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪ ಬೆಂಗಳೂರಿನಲ್ಲಿ ಕೇಳಿ ಬಂದಿದೆ.

ಆತ್ಯಾಚಾರ
ಆತ್ಯಾಚಾರ

By ETV Bharat Karnataka Team

Published : Apr 4, 2024, 3:17 PM IST

Updated : Apr 5, 2024, 9:54 AM IST

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಹೇಳಿಕೆ

ಬೆಂಗಳೂರು : ಕುಡಿದ ಆಮಲಿನಲ್ಲಿ ಮಹಿಳೆಯನ್ನು ಎಳೆದೊಯ್ದು ಆತ್ಯಾಚಾರ ಎಸಗಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೃತ್ಯವೆಸಗಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಮೃತಹಳ್ಳಿಯ ಲೇಔಟ್​​ವೊಂದರಲ್ಲಿ ವಾಸವಾಗಿದ್ದ 55 ವರ್ಷದ ಮಹಿಳೆ 'ಹತ್ಯಾ'ಚಾರಕ್ಕೆ ಒಳಗಾಗಿದ್ದಾಳೆ. ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶದ ಗೋರಕ್ ಪುರ ಮೂಲದ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ರಾಯಚೂರು ಮೂಲದ ಕುಟುಂಬವೊಂದು ಕೆಲಸ ಅರಸಿಕೊಂಡು ಮೂರ್ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿತ್ತು. ಅಮೃತಹಳ್ಳಿಯ ಲೇಔಟ್​ನಲ್ಲಿ ಶೆಡ್​ವೊಂದರಲ್ಲಿ ವಾಸವಾಗಿತ್ತು. ಕುಟುಂಬದ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಏಪ್ರಿಲ್ 2 ರ ರಾತ್ರಿ ಮನೆಯ ಸಮೀಪದಲ್ಲಿದ್ದ ಬಾರ್​ಗೆ ಹೋಗಿ ಮದ್ಯ ಸೇವಿಸಿ, ಹಿಂತಿರುಗುವಾಗ ಅದೇ ಬಾರ್​​ನಲ್ಲೇ ಪಾನಮತ್ತನಾಗಿದ್ದ ಯುವಕ ಮಹಿಳೆಯನ್ನು ಗಮನಿಸಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಮಾರ್ಗ ಮಧ್ಯೆ ಆಕೆಯನ್ನು ಬೆದರಿಸಿ, ಎಳೆದೊಯ್ದು ನಿರ್ಮಾಣ ಹಂತದ ಕಟ್ಟಡದಲ್ಲಿ ಆತ್ಯಾಚಾರವೆಸಗಿದ್ದಾನೆ. ಬಳಿಕ ಮಹಿಳೆಯನ್ನು ಹತ್ಯೆ ಮಾಡಿ ಯುವಕ ಎಸ್ಕೇಪ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರನೇ ದಿನ ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದ ಬಳಿ ಕಾರ್ಮಿಕರು ಮಹಿಳೆಯ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮತ್ತೊಂದೆಡೆ, ಮನೆಯಿಂದ ಹೊರಗೆ ಹೋಗಿದ್ದ ಮಹಿಳೆ ರಾತ್ರಿಯಿಡಿ ಬರದಿರುವುದನ್ನು ಅರಿತ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಕಟ್ಟಡದ ಬಳಿ ಶವ ಪತ್ತೆ ಮಾಹಿತಿ ಹಿನ್ನೆಲೆಯಲ್ಲಿ ಕುಟುಂಬಸ್ಥರು ಭೇಟಿ ನೀಡಿದಾಗ ಮಹಿಳೆ ಶವ ನಗ್ನವಾದ ಸ್ಥಿತಿಯಲ್ಲಿತ್ತು. ಮುಖ, ಮರ್ಮಾಂಗ ಹಾಗೂ ತಲೆ ಮೇಲೆ ರಕ್ತದ ಕಲೆಗಳು ಇರುವುದನ್ನು ಗುರುತಿಸಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಈ ಬಗ್ಗೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ತುಮಕೂರು: ಜಾತ್ರೆಗೆ ಬಂದಿದ್ದ ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ - ಮೂವರ ಬಂಧನ

Last Updated : Apr 5, 2024, 9:54 AM IST

ABOUT THE AUTHOR

...view details