ಕರ್ನಾಟಕ

karnataka

ETV Bharat / state

'ಟಗರು ಬೆಂಗಳೂರಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿಲ್ಲವೇ?': ಜನಾರ್ಧನ ರೆಡ್ಡಿಗೆ ಸಚಿವ ತಂಗಡಗಿ ಟಾಂಗ್ - Shivaraj Tangadagi - SHIVARAJ TANGADAGI

ಕೊಪ್ಪಳದ ಕಾರಟಗಿಯಲ್ಲಿ ಮತ ಪ್ರಚಾರದ ವೇಳೆ ಸಚಿವ ಶಿವರಾಜ್​ ತಂಗಡಗಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಸಚಿವ ಶಿವರಾಜ ತಂಗಡಗಿ
ಸಚಿವ ಶಿವರಾಜ ತಂಗಡಗಿ (Etv Bharat)

By ETV Bharat Karnataka Team

Published : May 5, 2024, 11:51 AM IST

Updated : May 6, 2024, 8:41 AM IST

ಸಚಿವ ತಂಗಡಗಿ ಟಾಂಗ್ (Etv Bharat)

ಕೊಪ್ಪಳ: "ಟಗರು ಬೆಂಗಳೂರಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿಲ್ವಾ ಜನಾರ್ಧನ ರೆಡ್ಡಿ?. ನಾನು ಎರಡು ಹೆಜ್ಜೆ ಮುಂದೆ ಹೋಗಿ ಮಾತನಾಡಬೇಕಾದೀತು, ಹುಷಾರ್​" ಎಂದು ಸಚಿವ ಶಿವರಾಜ್ ಎಸ್.ತಂಗಡಗಿ ಎಚ್ಚರಿಕೆ ನೀಡಿದರು.

ಕೊಪ್ಪಳದ ಕಾರಟಗಿಯಲ್ಲಿ ಶನಿವಾರ ಸಂಜೆ ನಡೆದ ಕಾಂಗ್ರೆಸ್ ಮತ ಪ್ರಚಾರ ಕಾರ್ಯಕ್ರಮದಲ್ಲಿ ಅವರು ವಾಗ್ದಾಳಿ ನಡೆಸಿದರು.

"ಜನಾರ್ಧನ ರೆಡ್ಡಿ ನಿನ್ನ ಹಣೆಬರಹ ನನಗೆ ಚೆನ್ನಾಗಿ ಗೊತ್ತು. ನಿನ್ನಿಂದ ತಂಗಡಗಿ ಮಂತ್ರಿಯಾಗಿಲ್ಲ. ಕನಕಗಿರಿ ಕ್ಷೇತ್ರದ ಜನರ ಆಶೀರ್ವಾದದಿಂದ ಮಂತ್ರಿಯಾಗಿದ್ದೇನೆ. ನೀನು ಆಡಿದ ಮಾತುಗಳನ್ನು, ಆ ಪದಗಳನ್ನು ನಾನೂ ಬಳಸಬಲ್ಲೆ. ಆ ತಾಕತ್ತು ನನಗೂ ಇದೆ. ಆದರೆ ನಿನ್ನ ಸಂಸ್ಕಾರ ನನ್ನದಲ್ಲ. ನನಗೂ ನಾಲಿಗೆ ಇದೆ" ಎಂದರು.

"ರಾಜ್ಯಸಭಾ ಚುನಾವಣೆಗೆ ಮುನ್ನ ನನ್ನ ಮನೆ ಸುತ್ತ ನೀನು ಓಡಾಡಿದ್ದನ್ನು‌ ಬಹಿರಂಗಪಡಿಸಲಾ?. ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದಕ್ಕೆ ನಿನ್ನ ಸುಮ್ಮನೆ ಬಿಟ್ಟಿದ್ದೀನಿ. ನನ್ನನ್ನು ಸೇರಿ ಐವರು ಶಾಸಕರ‌ ಬೆಂಬಲದಿಂದ ನೀನು, ನಿನ್ನ ಸರ್ಕಾರ‌ ಅಂದು ಅಧಿಕಾರಕ್ಕೆ ಬಂದಿತ್ತು. ನಾನು ಪಕ್ಷೇತರನಾಗಿ ಗೆದ್ದ ಕೂಡಲೆ ನಿನ್ನ ಕಾವಲುಗಾರರು ನನ್ನ ಮನೆ ಮುಂದೆ ನಿಂತು ನನಗಾಗಿ ಕಾವಲು ಕಾಯುತ್ತಿದ್ದುದು ಮರೆತೋಯಿತೇ? ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ" ಎಂದು ಹೇಳಿದರು.

Last Updated : May 6, 2024, 8:41 AM IST

ABOUT THE AUTHOR

...view details