ಕರ್ನಾಟಕ

karnataka

By ETV Bharat Karnataka Team

Published : Jul 2, 2024, 8:06 AM IST

Updated : Jul 2, 2024, 1:39 PM IST

ETV Bharat / state

ಹಾವೇರಿಯಲ್ಲಿ ಡೆಂಗ್ಯೂ ಹೆಚ್ಚಳ: ಜಿಲ್ಲಾಸ್ಪತ್ರೆಗೆ ಸಚಿವ ಶಿವಾನಂದ ಪಾಟೀಲ್​ ಭೇಟಿ - Dengue Cases In Haveri

ಜಿಲ್ಲೆಯಲ್ಲಿ ಇದುವರೆಗೆ ಡೆಂಗ್ಯೂದಿಂದ ಇಬ್ಬರು ಸಾವನ್ನಪ್ಪಿದ್ದು, ಒಂದು ಪ್ರಕರಣವನ್ನು ಮಾತ್ರ ರಾಜ್ಯ ಆರೋಗ್ಯ ಸಮಿತಿ ಡೆಂಗ್ಯೂ ಸಾವು ಎಂದು ಪರಿಗಣಿಸಿದೆ.

Minister Shivananda Patil visits to district newspaper
ಸಚಿವ ಶಿವಾನಂದ ಪಾಟೀಲ್ ಸೋಮವಾರ ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. (ETV Bharat)

ಹಾವೇರಿ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಸೋಮವಾರ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳು ಹಾಗೂ ವೈದ್ಯರ ಸಭೆ ನಡೆಸಿ, ಚರ್ಚಿಸಿದರು. ಪ್ರತಿ ವಾರ್ಡ್‌ಗೆ​ ಭೇಟಿ ನೀಡಿ ಪರಿಶೀಲಿಸಿದರು. ಡೆಂಗ್ಯೂ ವಾರ್ಡ್ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೂ ಭೇಟಿ ನೀಡಿ ರೋಗಿಗಳ ಮಾಹಿತಿ ಪಡೆದರು.

ಹಾವೇರಿಯಲ್ಲಿ ಡೆಂಗ್ಯೂ ಹೆಚ್ಚಳ: ಜಿಲ್ಲಾಸ್ಪತ್ರೆಗೆ ಸಚಿವ ಶಿವಾನಂದ ಪಾಟೀಲ್​ ಭೇಟಿ (ETV Bharat)

ನಂತರ ಮಾತನಾಡಿದ ಅವರು, "ಈ ಕುರಿತು ಮಂಗಳವಾರ ನಡೆಯುವ ಕೆಡಿಪಿ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಗುವುದು. ಹಾವೇರಿ ಜಿಲ್ಲಾಸ್ಪತ್ರೆಯ ವಿಸ್ತರಣೆ ಕಾರ್ಯ ಮುಗಿದರೆ ರೋಗಿಗಳು ಬೆಡ್ ಇಲ್ಲದೆ ಮಲಗುವ ಸಮಸ್ಯೆಗಳು ಬರುವುದಿಲ್ಲ. ಇಲ್ಲಿ ರೋಗಿಗಳ ದಟ್ಟಣೆ ಅಧಿಕ. ಜಿಲ್ಲಾಸ್ಪತ್ರೆಯ ಕಟ್ಟಡ ಪೂರ್ಣಗೊಂಡ ನಂತರ ಮತ್ತು ವೈದ್ಯಕೀಯ ಕಾಲೇಜು ಕಟ್ಟಡ ಲೋಕಾರ್ಪಣೆಗೊಂಡ ಮೇಲೆ ರೋಗಿಗಳ ದಟ್ಟಣೆ ಕಡಿಮೆಯಾಗಲಿದೆ" ಎಂದು ತಿಳಿಸಿದರು.

ಡೆಂಗ್ಯೂ ಪ್ರಕರಣಗಳ ಕುರಿತು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. "ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾದ ನಂತರ ಡೆಂಗ್ಯೂ ರೋಗದಿಂದ ಒಂದು ಸಾವಾಗಿದೆ" ಎಂದು ಮಾಹಿತಿ ನೀಡಿದರು.

"ಡೆಂಗ್ಯೂದಿಂದ ಜಿಲ್ಲೆಯಲ್ಲಿ ಎರಡು ಸಾವು ಸಂಭವಿಸಿದ್ದು, ರಾಜ್ಯ ಆರೋಗ್ಯ ಸಮಿತಿ ಈ ಪೈಕಿ ಒಂದು ಪ್ರಕರಣವನ್ನು ಡೆಂಗ್ಯೂ ಸಾವು ಎಂದು ಪ್ರಕಟಿಸಿದೆ. ಇನ್ನೊಂದು ಸಾವು ಡೆಂಗ್ಯೂ ಮತ್ತು ಇತರ ರೋಗಗಳಿಂದಾಗಿದೆ. ಜಿಲ್ಲೆಯಲ್ಲಿ ಇದುವರೆಗೊ 2,860 ಎಲೀಸಾ ಟೆಸ್ಟ್​ ಮಾಡಲಾಗಿದೆ. ಇದರಲ್ಲಿ 463 ಪ್ರಕರಣಗಳಲ್ಲಿ ಡೆಂಗ್ಯೂ ಇರುವುದು ದೃಢಪಟ್ಟಿದೆ. 455 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದ 8 ಪ್ರಕರಣಗಳಲ್ಲಿ ಎರಡು ಪ್ರಕರಣಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದರು.

ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ: "ರಾಜ್ಯದಲ್ಲಿ ಹೆಚ್ಚು ಡೆಂಗ್ಯೂ ಪರೀಕ್ಷೆ ನಡೆಸಿದ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ಹೆಚ್ಚೆಚ್ಚು ಪರೀಕ್ಷೆ ಮಾಡಿದ್ದರಿಂದ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ. ಮನೆಯ ಸುತ್ತಮುತ್ತ ಟೈರ್, ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮಳೆನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಸಂಗ್ರಹಿಸುವ ತೊಟ್ಟಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜ್ವರ ಬಂದ ತಕ್ಷಣ ಸ್ವ-ವೈದ್ಯಪದ್ಧತಿ ಅನುಸರಿಸದೆ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಬೇಕು. ಕೆಲವು ರೋಗ ಲಕ್ಷಣಗಳು ಡೆಂಗ್ಯೂ ರೋಗ ಲಕ್ಷಣಗಳಂತೆ ಕಾಣಿಸಿಕೊಳ್ಳುತ್ತವೆ. ಆದರೆ ಎಲೀಸಾ ಪರೀಕ್ಷೆಯಲ್ಲಿ ದೃಢಪಡಿಸಿದ ನಂತರ ಮಾತ್ರ ಅದು ಡೆಂಗ್ಯೂ ಹೌದೋ ಅಲ್ಲವೋ ಎಂದು ಗೊತ್ತಾಗುತ್ತದೆ" ಎಂದು ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿ; ಮೃತರ ಸಂಖ್ಯೆ 3ಕ್ಕೇರಿಕೆ - Young Man Succumbed To Dengue

Last Updated : Jul 2, 2024, 1:39 PM IST

ABOUT THE AUTHOR

...view details