ಕರ್ನಾಟಕ

karnataka

ETV Bharat / state

ಶಿಗ್ಗಾವಿಯ ಕಾಂಗ್ರೆಸ್ ಅಭ್ಯರ್ಥಿ ಪರ ಮತಪ್ರಚಾರಕ್ಕೆ ಸಿಎಂ, ಡಿಸಿಎಂ ಆಗಮಿಸಲಿದ್ದಾರೆ : ಸತೀಶ್ ಜಾರಕಿಹೊಳಿ - MINISTER SATISH JARKIHOLI

ಸಚಿವ ಸತೀಶ್​ ಜಾರಕಿಹೊಳಿ ಅವರು ಶಿಗ್ಗಾವಿ ವಿಧಾನಸಭೆ ಉಪಚುನಾವಣೆಯ ಕುರಿತು ಮಾತನಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಆಗಮಿಸಲಿದ್ದಾರೆ ಎಂದಿದ್ದಾರೆ.

minister-satish-jarkiholi
ಸಚಿವ ಸತೀಶ್​ ಜಾರಕಿಹೊಳಿ (ETV Bharat)

By ETV Bharat Karnataka Team

Published : Oct 26, 2024, 5:05 PM IST

ಹಾವೇರಿ : ಜಿಲ್ಲೆಯ ಶಿಗ್ಗಾವಿ ವಿಧಾನಸಭೆಯ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಮತಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಆಗಮಿಸಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಂಕಾಪುರ ಟೋಲ್ ಬಳಿಯ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರಚಾರ ಮಾಡಲಿದ್ದಾರೆ. ನವೆಂಬರ್ 5, 6 ಹಾಗೂ 11 ನೇ ತಾರೀಖು ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಸಚಿವ ಸತೀಶ್​ ಜಾರಕಿಹೊಳಿ ಮಾತನಾಡಿದರು (ETV Bharat)

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಫೀರ್ ಖಾದ್ರಿ ಮನವೊಲಿಕೆ ವಿಫಲವಾದ ವಿಚಾರ ಕುರಿತು ಮಾತನಾಡಿದ ಅವರು, ಈ ವಿಚಾರ ನಮ್ಮ ಗಮನಕ್ಕಂತೂ ಬಂದಿಲ್ಲ. ಅದರ ಬಗ್ಗೆ ಮಾಹಿತಿ ಇಲ್ಲ, ಮನವೊಲಿಕೆ ಮಾಡಲು‌ ಟೀಂ ಬೇರೆ ಇದೆ. ಕಾದು‌ ನೋಡೋಣ, ಇನ್ನೂ ಟೈಂ‌ ಇದೆ ಎಂದು ತಿಳಿಸಿದರು.

ನಾವೂ ವರ್ಕ್ ಮಾಡ್ತಾ ಇದ್ದೇವೆ. ಪಠಾಣ್ ಕೂಡಾ ಪಕ್ಷ ಕಟ್ಟಿದ್ದಾರೆ. ನಮಗೆ ನಮ್ಮದೇ ಪಕ್ಷದ ವೋಟಿದೆ. ಗೆಲ್ಲಲು ಅವಕಾಶ ಇದೆ. ಕಾಂಗ್ರೆಸ್ ನಾಯಕರು ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಗೆಲ್ಲುತ್ತೇವೆ ಅನ್ನೋ ಭರವಸೆ ಇದೆ.
ಲಿಂಗಾಯತರೂ ನಮ್ ಕಡೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ : ಉಪಚುನಾವಣೆ ಫಲಿತಾಂಶ ಕಾಂಗ್ರೆಸ್​ಗೆ ಎಚ್ಚರಿಕೆ ಘಂಟೆ ಆಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಜಾರಕಿಹೊಳಿ, ಈ ಫಲಿತಾಂಶ ಅವರಿಗೆ ಎಚ್ಚರಿಕೆ ಘಂಟೆ, ನಮಗೆ ಅಲ್ಲ. ನಾವು ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.

ಈ ಚುನಾವಣೆ ಫಲಿತಾಂಶ ನಾಯಕತ್ವದ ಮೇಲೆ ಪರಿಣಾಮ ಬೀರಲ್ಲ. ನಾವು 136 ಜನ ಶಾಸಕರಿದ್ದೇವೆ.
ಪ್ಲಸ್ ಮೈನಸ್ ಒಂದು ಎರಡು ಸ್ಥಾನ ಆದಾಗ ಏನೂ ಪರಿಣಾಮ ಆಗಲ್ಲ ಎಂದು ಹೇಳಿದರು. ನಿನ್ನೆ ಸಿಎಂ ಜೊತೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಶಿಗ್ಗಾವಿ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದೆವು. ಅವರ ಮಾರ್ಗದರ್ಶನವೂ ಬೇಕಲ್ವಾ ಎಂದರು.

ಇದನ್ನೂ ಓದಿ :ಶಿಗ್ಗಾಂವಿಯಲ್ಲಿ ಖಾದ್ರಿ ಪ್ರಶ್ನೆ ಬರಲ್ಲ, ಬಿಜೆಪಿ ವರ್ಸಸ್ ಕಾಂಗ್ರೆಸ್ ಅಷ್ಟೇ : ಸತೀಶ್ ಜಾರಕಿಹೊಳಿ

ABOUT THE AUTHOR

...view details