ಧಾರವಾಡ:ರಾಹುಲ್ ಗಾಂಧಿ ಹಿಡಿದ ಪುಸ್ತಕ ಬೈಬಲ್ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿಕೆ ವಿಚಾರಕ್ಕೆ 'ರಾಹುಲ್ ಗಾಂಧಿ ಯಾವಾಗಲು ಸಂವಿಧಾನ ಬುಕ್ ಹಿಡಿದುಕೊಂಡು ಇರುತ್ತಾರೆ. ಅಂತಹ ಬುಕ್ ಬೆಲ್ಲದವರಿಗೆ ಬೈಬಲ್ ರೀತಿ ಕಾಣುತ್ತದೆ ಅಂದರೆ ಅವರನ್ನೇ ಕೇಳಬೇಕು. ಇಲ್ಲ ಅವರು ಕಣ್ಣು ಚೆಕ್ ಮಾಡಬೇಕು' ಎಂದು ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ತುರ್ತು ಪರಿಸ್ಥಿತಿ ಹೇರಿದ ದಿನವನ್ನು ವಿರೋಧಿ ದಿನ ಎಂದು ಬಿಜೆಪಿ ಕಾರ್ಯಕ್ರಮದ ಬಗ್ಗೆ ಲಾಡ್ ಪ್ರತಿಕ್ರಿಯಿಸಿ, "ಅವರಿಗೆ ಮಾಡಲಿಕ್ಕೆ ಅಧಿಕಾರ ಇದೆ, ಮಾಡಲಿ. ಮೋದಿ ಸಾಹೇಬರು ಮಾಡೋದರ ಬಗ್ಗೆ ಸ್ವಲ್ಪ ಮಾತನಾಡುತ್ತಾರಾ? ನೀಟ್ ಬಗ್ಗೆ ಮಾತನಾಡುತ್ತಾರಾ?. 25 ಲಕ್ಷ ವಿದ್ಯಾರ್ಥಿಗಳ ಪರಿಸ್ಥಿತಿ ಏನಾಗಿದೆ?. ಅದರ ಜೊತೆ ಎಲೆಕ್ಷನ್ ಬಾಂಡ್ ಬಗ್ಗೆಯೂ ಮಾತನಾಡೋಕೆ ಹೇಳಿ ಸ್ವಲ್ಪ. ಇಂತಹ ವಿಚಾರಗಳನ್ನು ಸ್ವಲ್ಪ ಮಾತನಾಡಬೇಕು ಅವರು. ಯಾಕಂದರೆ ಇಂತಹ ವಿಚಾರ ಮಾತನಾಡೋದು ಉತ್ತಮ" ಎಂದು ವಾಗ್ದಾಳಿ ನಡೆಸಿದರು.