ಕರ್ನಾಟಕ

karnataka

ETV Bharat / state

ಮುಂದಿನ‌ ವಾರ ನನಗೂ ನೋಟಿಸ್ ಕೊಡಿಸುತ್ತಾರೆ; ಸಚಿವ ಪ್ರಿಯಾಂಕ್​ ಖರ್ಗೆ - MINISTER PRIYANK KHARGE

ಸಚಿವ ಪ್ರಿಯಾಂಕ್​ ಖರ್ಗೆ ಅವರು ಮುಡಾ ಪ್ರಕರಣದ ಕುರಿತು ಮಾತನಾಡಿದ್ದಾರೆ. ವಿಚಾರಣೆಗೆ ಹಾಜರಾಗಬೇಕಾಗಿ ಬಂದ್ರೆ ಸಿಎಂ ಹಾಜರಾಗ್ತಾರೆ. ಇದರಲ್ಲಿ ಆಶ್ಚರ್ಯ ಏನಿದೆ?. ಮುಂದಿನ ವಾರದಲ್ಲಿ ನನಗೂ ನೋಟಿಸ್ ಕೊಡಿಸ್ತಾರೆ ಎಂದಿದ್ದಾರೆ.

Minister-priyank-kharge
ಸಚಿವ ಪ್ರಿಯಾಂಕ ಖರ್ಗೆ (ETV Bharat)

By ETV Bharat Karnataka Team

Published : Oct 19, 2024, 9:55 PM IST

ಬೆಂಗಳೂರು :ಮುಡಾ ಸಂಬಂಧ ವಿಚಾರಣೆಗೆ ಹಾಜರಾಗಬೇಕಾಗಿ ಬಂದರೆ ಸಿಎಂ ಸಿದ್ದರಾಮಯ್ಯ ಹಾಜರಾಗುತ್ತಾರೆ. ಮುಂದಿನ‌ ವಾರ ನನಗೂ ನೋಟಿಸ್ ಕೊಡಿಸುತ್ತಾರೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದ್ದಾರೆ.

ಶನಿವಾರ ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಅವರು, ಇಡಿಯವರು ಸೆಲಕ್ಟಿವ್ ಆಗಿ ಏಕೆ ದಾಳಿ ಮಾಡುತ್ತಿದ್ದಾರೆ ಎಂಬುದು ನಮ್ಮ ಆರೋಪ. ವಿಚಾರಣೆಗೆ ಹಾಜರಾಗಬೇಕು, ಸಿಎಂ ಹಾಜರಾಗ್ತಾರೆ. ಆಶ್ಚರ್ಯ ಏನಿದೆ ಇದರಲ್ಲಿ?. ರಾಜ್ಯಪಾಲರು ಬಿಜೆಪಿ‌ ಕೈಗೊಂಬೆ ಅಂತ ಹೇಳಿದ್ದೆ. ಮುಂದಿನ ವಾರದಲ್ಲಿ ನನಗೂ ನೋಟಿಸ್ ಕೊಡಿಸ್ತಾರೆ. 100% ಮಾಡ್ತಾರೆ. ತತ್ವ ಸಿದ್ಧಾಂತದ ವಿರುದ್ಧ ಇರುವವರು ಅವರಿಗೆ ಟಾರ್ಗೆಟ್ ಎಂದು ಆರೋಪಿಸಿದರು.

ಮುಡಾ ಕಚೇರಿ ಮೇಲೆ ಇಡಿ ದಾಳಿ ನಿರೀಕ್ಷೆ ಮಾಡುವಂತದ್ದೇ. ಸಿಎಂ ಕೂಡ ಅವತ್ತೇ ಹೇಳಿದ್ದಾರೆ. ಇಡಿ, ಐಟಿ ಬರಲಿ ತನಿಖೆ ಮಾಡಲಿ ಅಂದಿದ್ದಾರೆ. ಇಡಿ ವ್ಯಾಪ್ತಿಯನ್ನು ಯಾವತ್ತೂ ಪ್ರಶ್ನೆ ಮಾಡಿಲ್ಲ. ಆದರೆ ಸೆಲೆಕ್ಟಿವ್ ಇನ್ವೆಸ್ಟಿಗೇಷನ್ ಕುರಿತು ಪ್ರಶ್ನೆ ಅಷ್ಟೇ ಎಂದು ದೂರಿದರು.

5 ಕೋಟಿ ವಂಚಿಸಿದ್ದಾರೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರನಿಂದ ವಂಚನೆ ಅಂತ ಆರೋಪ ಬಂದಿದೆ. ಅದನ್ನು ಮಾಡಿದವರು ಯಾರು?. ಯಾರ ಹೆಸರಲ್ಲಿ ಆಗಿದೆ. ಬಿಜೆಪಿ ವರಿಷ್ಠರ ಹೆಸರಲ್ಲಿ ಆಗಿದ್ದು ಅಲ್ವಾ?. ದೂರುದಾರರು ಯಾರು?. ಬಿಜೆಪಿಯ ಮಾಜಿ ಶಾಸಕರು. ಜೋಶಿ ಸಹೋದರ, ಮಗ ಸೇರಿ ವಂಚಿಸಿದ್ದಾರೆ. ಆ ಹಣ ಯಾರಿಗೆ ಕೊಟ್ಟಿದ್ದಾರೆ?. ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಕೊಟ್ಟಿದ್ದಾರೆ. ನಮಗೆ ಸಂಬಂಧ ಇಲ್ಲ ಅಂತ ಜೋಶಿ ಹೇಳ್ತಾರೆ. ಹಾಗಾದ್ರೆ ಬಿಜೆಪಿಯವರಿಗೆ ಸಂಬಂಧವಿಲ್ಲವಾ?. ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಈ ರೀತಿ ಆರೋಪವಿದೆ. ಕಲಬುರಗಿ, ಜೇವರ್ಗಿಯಲ್ಲೂ ಟಿಕೆಟ್ ಮಾರಾಟ ಅಂತ ಬಂತು. ಚೈತ್ರಾ ಕುಂದಾಪುರ್ ಪ್ರಕರಣ ಏನಾಯ್ತು ಎಂದು ಸಚಿವ ಖರ್ಗೆ ಪ್ರಶ್ನಿಸಿದರು.

ಈ ಪ್ರಕರಣಕ್ಕೆ ಯಾರು ರಾಜೀನಾಮೆ ಕೊಡಬೇಕು: ಕಾಂಗ್ರೆಸ್​ನವರಿಗೆ ಮಾತ್ರ ಐಟಿ, ಇಡಿ ಥ್ರೆಟ್. ಬಿಜೆಪಿಯವರ ಪ್ರಕರಣಗಳಿಗೆ ಐಟಿ, ಇಡಿ ಇಲ್ವಾ?. ವಾಲ್ಮೀಕಿ ಹಗರಣದಲ್ಲಿ ಏನು ಹೇಳಿದ್ರಿ?. ಸಿಎಂ ರಾಜೀನಾಮೆ ಕೊಡಬೇಕು ಅಂದ್ರಿ. ಈ ಪ್ರಕರಣಕ್ಕೆ ಯಾರು ರಾಜೀನಾಮೆ ಕೊಡಬೇಕು?. ಈಗ ಯಾರ ಹೆಸರು ತಳಕು ಹಾಕಿಕೊಂಡಿದೆ?. ಅಮಿತ್ ಶಾ ಹೆಸರು ಬಂದಿದೆ. ಅವರ ಸೆಕ್ರೆಟರಿ ಹೆಸರು ಬಂದಿದೆ. ನಿಮಗೊಂದು ನ್ಯಾಯ, ಅವರಿಗೊಂದು ನ್ಯಾಯವೇ? ಎಂದು ಖರ್ಗೆ ಕೇಳಿದ್ರು.

ಇದನ್ನೂ ಓದಿ :2ನೇ ದಿನವೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ EDಯಿಂದ ದಾಖಲೆಗಳ ಪರಿಶೀಲನೆ

ABOUT THE AUTHOR

...view details