ETV Bharat / state

ಬೆಂಗಳೂರು ಟು ಲಂಡನ್​​ ನೇರ ವಿಮಾನ ಸೇವೆ: ಅದರ ವೇಳಾಪಟ್ಟಿ ಹೀಗಿದೆ

ಬೆಂಗಳೂರಿನಿಂದ ಲಂಡನ್​​ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ನೇರ ಪ್ರಯಾಣವನ್ನು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ಇದೇ 27 ರಿಂದ ಆರಂಭಿಸಲಿದೆ.

ಏರ್​​ ಇಂಡಿಯಾ ವಿಮಾನ ಸೇವೆ
ಏರ್​​ ಇಂಡಿಯಾ ವಿಮಾನ ಸೇವೆ (ETV Bharat)
author img

By ETV Bharat Karnataka Team

Published : Oct 19, 2024, 10:55 PM IST

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ಹೊಸ ಮಾರ್ಗವನ್ನು ಆರಂಭಿಸಿದೆ. ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ನೇರ ವಿಮಾನವನ್ನು ಅಕ್ಟೋಬರ್ 27 ರಿಂದ ದೈನಂದಿನ ಸೇವೆಯನ್ನು ಘೋಷಿಸಿದೆ.

ಬೆಂಗಳೂರಿನಿಂದ ಲಂಡನ್​​ನ ಹೀಥ್ರೂಗೆ ಅತಿಹೆಚ್ಚು ಜನರು ಪ್ರಯಾಣ ಬೆಳೆಸಲಿದ್ದು, ಅವರಿಗೆ ಹೆಚ್ಚು ಅನುಕೂಲವಾಗಲಿದೆ. ಬೆಂಗಳೂರಿನಿಂದ ಲಂಡನ್​​ನ ಗ್ಯಾಟ್​ವಿಕ್​​ಗೆ ತೆರಳಿ ಅಲ್ಲಿಂದ ಹೀಥ್ರೂಗೆ ಪ್ರಯಾಣಿಸಲಿದೆ ಎಂದು ಏರ್​​ ಇಂಡಿಯಾ ಸಂಸ್ಥೆ ತಿಳಿಸಿದೆ.

ಬೆಂಗಳೂರು-ಲಂಡನ್ ಮಾರ್ಗದಲ್ಲಿನ ವಿಮಾನವನ್ನು ವಾರಕ್ಕೆ ಐದು ಬಾರಿ ದೈನಂದಿನ ಪ್ರಯಾಣವಿರಲಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ಏರ್‌ಕ್ರಾಫ್ಟ್‌ ವಿಮಾನ ಸೇವೆ ಇದಾಗಿದೆ. ಬುಸಿನೆಸ್​ ಕ್ಲಾಸ್​ನಲ್ಲಿ 18 ಫ್ಲಾಟ್ ಬೆಡ್‌ಗಳು ಮತ್ತು 238 ಎಕಾನಮಿ ಸೀಟ್‌ಗಳನ್ನು ವಿಮಾನ ಹೊಂದಿದೆ. ಎರಡು ನಗರಗಳ ನಡುವೆ ವಾರಕ್ಕೆ ಒಟ್ಟು 3,584 ಜನರನ್ನು ಹೊತ್ತೊಯ್ಯಬಹುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಏರ್ ಇಂಡಿಯಾ ಈಗಾಗಲೇ ದೆಹಲಿ ಮತ್ತು ಮುಂಬೈನಿಂದ ಲಂಡನ್​ನ ಹೀಥ್ರೂಗೆ ವಾರಕ್ಕೊಮ್ಮೆ ವಿಮಾನಗಳನ್ನು ನಿರ್ವಹಿಸುತ್ತಿದೆ. ಈ ಹಾದಿಯಲ್ಲಿ ಬೆಂಗಳೂರನ್ನು ಸೇರಿಸುವುದರಿಂದ ಏರ್ ಇಂಡಿಯಾದ ಎಲ್ಲಾ ಮೂರು ಪ್ರಮುಖ ಕೇಂದ್ರಗಳನ್ನು ಈ ಪ್ರಮುಖ ಗಮ್ಯಸ್ಥಾನಕ್ಕೆ ಸಂಪರ್ಕಿಸುತ್ತದೆ. ಈ ಬದಲಾವಣೆಯ ಹೊರತಾಗಿಯೂ, ಏರ್ ಇಂಡಿಯಾ ಅಹಮದಾಬಾದ್, ಅಮೃತಸರ, ಗೋವಾ ಮತ್ತು ಕೊಚ್ಚಿಯಿಂದ ಲಂಡನ್ ಗ್ಯಾಟ್ವಿಕ್‌ಗೆ ಒಟ್ಟು 12 ಸಾಪ್ತಾಹಿಕ ಸೇವೆಗಳೊಂದಿಗೆ ವಿಮಾನ ಸೇವೆ ನೀಡುವುದನ್ನು ಮುಂದುವರಿಸುತ್ತದೆ.

ಬೆಂಗಳೂರು-ಹೀಥ್ರೂ ವೇಳಾಪಟ್ಟಿಯ ಪ್ರಕಾರ, ಫ್ಲೈಟ್ AI133 ಬೆಂಗಳೂರಿನಿಂದ ಸ್ಥಳೀಯ ಸಮಯ ಮಾಧ್ಯಾಹ್ನ 2.20 ಕ್ಕೆ ಹೊರಡುತ್ತದೆ. ಲಂಡನ್ ಹೀಥ್ರೂಗೆ 7.30 ನಿಮಿಷಕ್ಕೆ ತಲುಪುತ್ತದೆ. ಹಿಂದಿರುಗುವ AI132 ವಿಮಾನವು ಲಂಡನ್ ಹೀಥ್ರೂನಿಂದ 11.05 ಕ್ಕೆ ಹೊರಟು ಮರುದಿನ ಮಧ್ಯಾಹ್ನ 12:20 ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

ಏರ್ ಇಂಡಿಯಾದ ಅಧಿಕೃತ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಹೊಸ ವಿಮಾನಗಳಿಗಾಗಿ ಬುಕಿಂಗ್‌ಗಳನ್ನು ಈಗಾಗಲೇ ಆರಂಭಿಸಲಾಗಿದೆ. ಈ ಹೊಸ ಮಾರ್ಗವು ತನ್ನ ಐದು ವರ್ಷಗಳ ರೂಪಾಂತರ ಯೋಜನೆಯಡಿ ಏರ್ ಇಂಡಿಯಾದ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ.

ಇದನ್ನೂ ಓದಿ: ಬಿಕ್ಕಟ್ಟಿನ ನಡುವೆ ಪಾಕಿಸ್ತಾನದ ಯುವತಿ ಜೊತೆ ಬಿಜೆಪಿ ಲೀಡರ್​ ಪುತ್ರನ 'ವರ್ಚುವಲ್​ ಮ್ಯಾರೇಜ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.