ಕರ್ನಾಟಕ

karnataka

ETV Bharat / state

ಕೋಳಿ ಕೇಳಿ ಯಾರೂ ಕೊಯ್ಯಲ್ಲ: ಸ್ವಪಕ್ಷದವರ ವಿರುದ್ಧವೇ ಸಚಿವ ವೆಂಕಟೇಶ್ ಠಕ್ಕರ್

ಎಲ್ಲರನ್ನೂ ಕೇಳಿ ನಿಗಮ ಮಂಡಳಿ ನೇಮಕ ಮಾಡಲು ಸಾಧ್ಯವಿಲ್ಲ ಎಂದು ಸ್ವಪಕ್ಷದವರ ವಿರುದ್ಧವೇ ಸಚಿವ ಕೆ ವೆಂಕಟೇಶ್ ಅವರು ಕಿಡಿಕಾರಿದ್ದಾರೆ.

ಸಚಿವ ವೆಂಕಟೇಶ್
ಸಚಿವ ವೆಂಕಟೇಶ್

By ETV Bharat Karnataka Team

Published : Jan 26, 2024, 3:13 PM IST

ಸಚಿವ ವೆಂಕಟೇಶ್

ಚಾಮರಾಜನಗರ : ಕೋಳಿ ಕೇಳಿ ಯಾರೂ ಅದನ್ನು ಕೊಯ್ಯಲ್ಲ ಎನ್ನುವ ಮೂಲಕ ಸ್ವಪಕ್ಷದ ಮುಖಂಡರ ವಿರುದ್ಧವೇ ಸಚಿವ ಕೆ. ವೆಂಕಟೇಶ್ ಅವರು ಕಿಡಿಕಾರಿದ್ದಾರೆ. ನಿಗಮ‌ ಮಂಡಳಿ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಜಿ. ಪರಮೇಶ್ವರ್, ರಾಜಣ್ಣ ಹೇಳಿಕೆಗೆ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಪ್ರತಿಕ್ರಿಯಿಸಿದರು. ಕೋಳಿ ಕೊಯ್ಯಬೇಕಾದರೆ ಅದನ್ನು ಕೇಳಲು ಸಾಧ್ಯವೇ, ಎಲ್ಲರನ್ನೂ ಕೇಳಿ ನಿಗಮ ಮಂಡಲಿ ಮಾಡಲು ಸಾಧ್ಯವಾಗಲ್ಲ. ಅವರ ಅಭಿಪ್ರಾಯ ಇದ್ದರೆ ಹೇಳಬೇಕು, ಅದು ಆಗತ್ತೋ ಬಿಡತ್ತೋ ಮುಂದಿನ ವಿಚಾರ ಎಂದು ಹರಿಹಾಯ್ದಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆ ಕುರಿತು ಮಾತನಾಡಿ, ಶೆಟ್ಟರ್ ಅವರು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕೆಲಸ‌ ಮಾಡಿ ಸಾರ್ವಜನಿಕ ಜೀವನದಲ್ಲಿ ಅವರದೇ ಆದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಒಂದಿನ ಈ ಪಾರ್ಟಿ ಒಂದಿನ ಆ ಪಾರ್ಟಿ ಎಂದರೆ ಏನು ಹೇಳಬೇಕು ಅವರಿಗೆ..?. ಅವರಿಗೆ ಗೌರವ ಕೊಡಲು ಎಂಎಲ್​​ಸಿಯನ್ನಾಗಿ ಪಕ್ಷ ಮಾಡಿತ್ತು. ಆಪರೇಷನ್ ಮಾಡುವವರು ಮಾಡುತ್ತಿರುತ್ತಾರೆ. ಆದರೆ ನಮ್ಮ ಪಕ್ಷದವರು ಯಾರೂ ಅಲ್ಲಿಗೆ ಹೋಗಲ್ಲ. 5 ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳಾದ ನಾವು ಪ್ರತಿಯೊಂದು ಸಾವಿಗೂ ಹೋಗುತ್ತೇವೆ, ಮದುವೆಗೂ ಹೋಗುತ್ತೇವೆ, ನಾಮಕರಣಕ್ಕೂ ಹೋಗುತ್ತೇವೆ. ಇವೆಲ್ಲಾ ವರ್ಕೌಟ್ ಆಗಲ್ಲ. ಪಬ್ಲಿಕ್ ಮೆಮೊರಿ ವೆರಿ ಶಾರ್ಟ್. ಬೇಗ ಮರೆಯುತ್ತಾರೆ. ಶ್ರೀರಾಮ ಮಂದಿರ ಉದ್ಘಾಟನೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವರು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಆಮ್ಲಜನಕ ದುರಂತ ಸಂತ್ರಸ್ತರಿಗೆ ನೌಕರಿ : ಆಕ್ಸಿಜನ್ ದುರಂತ ಸಂತ್ರಸ್ತರ ಕುಟುಂಬಕ್ಕೆ ಫೆ. 1 ರಿಂದ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಖಾಯಂ‌ ನೌಕರಿ ಮತ್ತು ಪರಿಹಾರವನ್ನು ನೀಡಲಾಗುವುದು. ತಾತ್ಕಾಲಿಕವಾಗಿ ಅವರ ಬದುಕಿಗೆ ಆಧಾರವಾಗಲಿ ಎಂದು 32 ಕುಟುಂಬಗಳ ತಲಾ ಒಬ್ಬರಿಗೆ ಈ ನೌಕರಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಲೋಕಸಭೆಗೆ ಸ್ಪರ್ಧಿಸಲ್ಲ, ಮತ್ತೆ ಚುನಾವಣೆಗೂ ನಿಲ್ಲಲ್ಲ: ಸಚಿವ ವೆಂಕಟೇಶ್

ABOUT THE AUTHOR

...view details