ಕರ್ನಾಟಕ

karnataka

ETV Bharat / state

ವಿವಾದಾತ್ಮಕ ಹೇಳಿಕೆ ಸಂಬಂಧ ಪ್ರಕರಣ ದಾಖಲಾದರೆ ಪ್ರಲ್ಹಾದ್​ ಜೋಶಿ ಜೈಲಿಗೆ: ದಿನೇಶ್ ಗುಂಡೂರಾವ್ - DINESH GUNDURAO

ನಿವೃತ್ತ ನ್ಯಾ. ಮೈಕಲ್​ ಡಿ ಕುನ್ಹಾ ಅವರು ನೀಡಿರುವ ಪ್ರಥಮ ವರದಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಅವ್ಯವಹಾರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್ (ETV Bharat)

By ETV Bharat Karnataka Team

Published : Nov 16, 2024, 8:40 PM IST

ಮಂಗಳೂರು(ದಕ್ಷಿಣ ಕನ್ನಡ):ಕೋವಿಡ್ ಹಗರಣ ಸಂಬಂಧ ನಿವೃತ್ತ ನ್ಯಾ. ಮೈಕಲ್​ ಡಿ ಕುನ್ಹಾ ಪ್ರಥಮ ವರದಿ ನೀಡಿದ್ದಾರೆ. ಎರಡನೇ ಮತ್ತು ಅಂತಿಮ ವರದಿ ನೀಡಬೇಕಾಗಿದೆ. ಪ್ರಥಮ ವರದಿಯಲ್ಲಿ ಕೋವಿಡ್ ಸಂದರ್ಭದ ಅವ್ಯವಹಾರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರಲ್ಲಿ ದಾರಿ ತಪ್ಪಿಸುವ ತಂತ್ರ ಏನಿಲ್ಲ. ನಿಯಮ ಬದ್ಧವಾಗಿ ಕಾನೂನು ಪ್ರಕಾರ ತನಿಖೆ ಮುಂದುವರಿಸುತ್ತೇವೆ. ಇದರಲ್ಲಿ ರಾಜಕೀಯ ದುರುದ್ದೇಶ ಏನಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾ. ಮೈಕಲ್ ಡಿ ಕುನ್ಹಾ ಬಗ್ಗೆ ಪ್ರಲ್ಹಾದ್​ ಜೋಶಿ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕುನ್ಹಾ ಅವರು ಅತ್ಯಂತ ಪ್ರಾಮಾಣಿಕ ನ್ಯಾಯಾಧೀಶರು. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಇದರಿಂದ ಜೋಶಿಯವರಿಗೆ ಸಮಸ್ಯೆಯಾಗಿದೆ. ಜೋಶಿ ವಿರುದ್ಧ ಪ್ರಕರಣ ದಾಖಲಾದರೆ ಅವರು ಜೈಲು ಸೇರುವ ಸಂದರ್ಭ ಬರಬಹುದು. ಈ ವಿಚಾರದಲ್ಲಿ ನಿವೃತ್ತ ನ್ಯಾ. ಮೈಕಲ್​ ಡಿ ಕುನ್ಹಾ ಏನು ಮಾಡುತ್ತಾರೆಂದು‌ ಗೊತ್ತಿಲ್ಲ. ನಾವು ಈ ಕುರಿತು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದರು.

ದಿನೇಶ್ ಗುಂಡೂರಾವ್ (ETV Bharat)

ಒಬ್ಬ ಜಡ್ಜ್ ಬಗ್ಗೆ ಆ ರೀತಿ ಮಾತನಾಡುವಂತಿಲ್ಲ. ಈ ವರದಿಯಲ್ಲಿರುವುದು ನಾವು ಹುಟ್ಟು ಹಾಕಿರೋದಲ್ಲ. ನಮ್ಮ ಇಲಾಖೆಯಲ್ಲಿರುವ ಮಾಹಿತಿ ಸಂಗ್ರಹಿಸಿ ತನಿಖೆ‌ ಮಾಡಿ ಅದರ ವರದಿ ನೀಡಿದ್ದಾರೆ. ಇದು ಐಟಿ, ಇ.ಡಿ ತರ ರಾಜಕೀಯ ಪ್ರೇರಿತ ಅಲ್ಲ. ಇ.ಡಿ, ಐಟಿಗೆ ವಿರೋಧ ಪಕ್ಷ ಮಾತ್ರ ಕಾಣುತ್ತೆ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.

ಇದನ್ನೂ ಓದಿ:ಕೋವಿಡ್ ನಿರ್ವಹಣೆಯಲ್ಲಿ ಹಣಕಾಸಿನ ಜವಾಬ್ದಾರಿ, ನಿಯಂತ್ರಣ ನನ್ನ ವ್ಯಾಪ್ತಿಗೆ ಬಂದಿಲ್ಲ: ಸಂಸದ ಸಿ.ಎನ್.ಮಂಜುನಾಥ್

ABOUT THE AUTHOR

...view details