ಕರ್ನಾಟಕ

karnataka

ETV Bharat / state

ಬೆಂಗಳೂರು: ಮಾತ್ರೆ ಕೊಡಲು ಬಂದ ಬಾವನ ಇರಿದು ಕೊಂದ ಬಾಮೈದ - Bengaluru Murder Case - BENGALURU MURDER CASE

ಮಾತ್ರೆ ಕೊಡಲು ಬಂದ ಬಾವನನ್ನೇ ಬಾಮೈದ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಆರೋಪಿ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ತಿಳಿದು ಬಂದಿದೆ.

ಆರೋಗ್ಯ ವಿಚಾರಿಸಲು ಬಂದ ಬಾವನಿಗೆ ಇರಿದು ಕೊಂದ ಬಾಮೈದ
ಆರೋಗ್ಯ ವಿಚಾರಿಸಲು ಬಂದ ಬಾವನಿಗೆ ಇರಿದು ಕೊಂದ ಬಾಮೈದ (ETV Bharat)

By ETV Bharat Karnataka Team

Published : Sep 9, 2024, 9:54 AM IST

ಡಿಸಿಪಿ ಎಸ್.ಗಿರೀಶ್ ಮಾಹಿತಿ (ETV Bharat)

ಬೆಂಗಳೂರು:ತನ್ನ ಆರೋಗ್ಯ ವಿಚಾರಿಸಲು ಮನೆಗೆ ಬಂದಿದ್ದ ಬಾವನನ್ನೇ ಬಾಮೈದ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಹೊಸಗುಡ್ಡದ ಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವೆಂಕಟಾಚಲಪತಿ (45) ಕೊಲೆಯಾದ ವ್ಯಕ್ತಿ. ಕೃತ್ಯ ಎಸಗಿದ ಆರೋಪಿ ವಿಶ್ವನಾಥ (45) ಎಂಬಾತನನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರಂನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ವಿಶ್ವನಾಥ್, ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು. ಸಹೋದರ ವಿಶ್ವನಾಥನ ಆರೋಗ್ಯದ ಕುರಿತು ಸಹೋದರಿ ಹಾಗೂ ಸಹೋದರಿಯ ಗಂಡ ವೆಂಕಟಾಚಲಪತಿ ಕಾಳಜಿ ತೋರಿಸುತ್ತಿದ್ದರು. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸಹೋದರ ವಿಶ್ವನಾಥನ ಆರೋಗ್ಯ ವಿಚಾರಿಸಿಕೊಂಡು ಔಷಧಿ ಕೊಟ್ಟು ಹೋಗಲು ಆರೋಪಿಯ ಸಹೋದರಿ ಹಾಗೂ ಬಾವ ವೆಂಕಟಾಚಲಪತಿ ಮನೆ ಬಳಿ ಬಂದಿದ್ದರು. ಈ ವೇಳೆ ಆರೋಪಿ ವಿಶ್ವನಾಥ್ ಚಾಕುವಿನಿಂದ ವೆಂಕಟಾಚಲಪತಿಗೆ ಇರಿದು ಕೊಲೆ ಮಾಡಿದ್ದಾನೆ. ಈ ಘಟನೆಯ ಕುರಿತು ಕ್ರಮ ಕೈಗೊಂಡಿದ್ದೇವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಪೊಲೀಸರು ‌ಸ್ಥಳಕ್ಕೆ ತೆರಳಿ‌ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದರು.

ಇದನ್ನೂ ಓದಿ: ಮಧುಗಿರಿ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಐವರು ಸಾವು - Tumakuru Accident

ABOUT THE AUTHOR

...view details