ಕರ್ನಾಟಕ

karnataka

ETV Bharat / state

ಬೆಂಗಳೂರು: ಚಾಲನಾ ಪರೀಕ್ಷೆ ಪೂರ್ಣವಾದರೂ ಲೈಸೆನ್ಸ್​ ಸಿಗದೆ ಚಾಲಕರ ಪರದಾಟ

ಚಾಲನಾ ಪರೀಕ್ಷೆ ಪೂರ್ಣಗೊಳಿಸಿರುವವರು ಮತ್ತು ಹಳೆಯ ಕಾರ್ಡ್‌ನ್ನು ನವೀಕರಿಸಲು ಅರ್ಜಿ ಸಲ್ಲಿಸಿದವರು ಡ್ರೈವಿಂಗ್​ ಲೈಸೆನ್ಸ್​ ಸಿಗದೆ ಸಮಸ್ಯೆ ಅನುಭವಿಸುವಂತಾಗಿದೆ.

driving-test-is-completed-but-drivers-are-not-getting-license
ಚಾಲನಾ ಪರೀಕ್ಷೆ ಪೂರ್ಣವಾದರೂ ಲೈಸೆನ್ಸ್​ ಸಿಗದೆ ಚಾಲಕರ ಪರದಾಟ

By ETV Bharat Karnataka Team

Published : Feb 4, 2024, 9:11 PM IST

ಬೆಂಗಳೂರು: ಚಾಲನಾ ಪರೀಕ್ಷೆ ಪೂರ್ಣಗೊಳಿಸಿರುವವರು ಹಾಗೂ ಹಳೆಯ ಕಾರ್ಡ್‌ನ್ನು ನವೀಕರಿಸಲು ಅರ್ಜಿ ಸಲ್ಲಿಸಿರುವವರು ಪರವಾನಗಿ ದೊರೆಯದೇ ಇಕ್ಕಟ್ಟಿನ ಸ್ಥಿತಿ ಎದುರಿಸುತ್ತಿದ್ದಾರೆ. ಸಾರಿಗೆ ಇಲಾಖೆಯು ಚಾಲನಾ ಪರವಾನಗಿಯನ್ನು ಚಿಪ್ ಆಧಾರಿತ ಸ್ಮಾರ್ಟ್ ಕಾರ್ಡ್‌ ಆಗಿ ಪರಿವರ್ತಿಸುತ್ತಿದ್ದು, ಈ ಕಾರ್ಡ್‌ನ್ನು ಪೂರೈಕೆ ಮಾಡುವವರ ಸಂಸ್ಥೆಗಳ ಕೊರತೆ ಇರುವುದರಿಂದ, ಪರವಾನಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ಸಾರಿಗೆ ಇಲಾಖೆಯಲ್ಲಿ ಈಗಿರುವ ಕಾರ್ಡ್ ಗಳನ್ನು ಆಧುನಿಕ ಸ್ಮಾರ್ಟ್ ಕಾರ್ಡ್‌ಗಳಿಗೆ ಬದಲಾವಣೆ ಆಗುತ್ತಿದೆ. ದೇಶಾದ್ಯಂತ ಕೂಡ ಒಂದೇ ರೀತಿಯ ಕಾರ್ಡ್ ಇರಲಿದೆ. ಈ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್‌ಗಳಿರುವುದರಿಂದ, ದೇಶದ ಯಾವುದೇ ಮೂಲೆಯಲ್ಲಾದರೂ ಬಳಸಬಹುದಾಗಿದೆ.

ಈ ಬಗ್ಗೆ ಸಾರಿಗೆ ಚಾಲಕರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಿ ವಿ ರಾಘವೇಂದ್ರ ಮಾತನಾಡಿ, "ಈ ಹಿಂದೆ ನಮಗೆ ಕೆಲವೇ ದಿನಗಳಲ್ಲಿ ಡಿಎಲ್ ಸಿಗುತ್ತಿತ್ತು. ಆದರೆ ಕಳೆದ ಕೆಲವು ವಾರಗಳಿಂದ, ಹೊಸದಾಗಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಮತ್ತು ಡಿಎಲ್‌ಗಳನ್ನು ನವೀಕರಿಸಲು ಅರ್ಜಿ ಹಾಕಿದ ಅನೇಕ ಆಟೋ ಮತ್ತು ಕ್ಯಾಬ್ ಚಾಲಕರು ಇನ್ನೂ ಅವುಗಳನ್ನು ಸ್ವೀಕರಿಸಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಿಚಾರಿಸಿದಾಗ, ಅವರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಸರಬರಾಜು ಮಾಡಬೇಕಾದ ಡೀಲರ್ ಇನ್ನೂ ತಲುಪಿಸಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ" ಎಂದಿದ್ದಾರೆ.

ಸಾರಿಗೆ ಇಲಾಖೆಯ ಅಧಿಕಾರಿಗಳು ಹೊಸ ಸ್ಮಾರ್ಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾರ್ಡ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಸಂಖ್ಯೆಗಳು ಸಹ ಇರಲಿದೆ. ಡಿಎಲ್ ಪಡೆಯುವಲ್ಲಿ ವಿಳಂಬವಾಗಿರುವುದರಿಂದ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪರವಾನಗಿಯನ್ನು ಇನ್ನೂ ಸ್ವೀಕರಿಸದಿದ್ದಲ್ಲಿ ಆ ಪ್ರಕರಣವನ್ನು ಹೇಗೆ ಪರಿಗಣಿಸಬೇಕು ಎಂಬ ಗೊಂದಲದ ಪರಿಸ್ಥಿತಿ ಇದೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

ಯಾರು ಡಿಎಲ್ ಪರೀಕ್ಷೆ ತೆಗೆದುಕೊಳ್ಳುತ್ತಾರೋ ಅವರ ಮನೆ ಬಾಗಿಲಿಗೆ ಕೆಲವೇ ದಿನಗಳಲ್ಲಿ ಪರವಾನಗಿ ಸಿಗಬೇಕು. ಅವರು ತಮ್ಮ ನೋಂದಾಯಿತ ವಿಳಾಸಗಳಿಗೆ ತಮ್ಮ ಡಿಎಲ್‌ಗಳ ರವಾನೆ ಬಗ್ಗೆ ಸಂದೇಶಗಳನ್ನು ಸಹ ಪಡೆಯುತ್ತಾರೆ. ಕೆಲವರು ಕಾರ್ಡ್‌ಗಳನ್ನು ಸ್ವೀಕರಿಸದಿರುವ ನಿದರ್ಶನಗಳಿರಬಹುದು. ಆದರೆ ಸ್ಮಾರ್ಟ್ ಕಾರ್ಡ್‌ಗಳ ಕೊರತೆ ಇಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಬರಲಿದೆ ಆ್ಯಪಲ್ ಸೆಲ್ಫ್​ ಡ್ರೈವಿಂಗ್​ ಕಾರು: ಬೆಲೆ 1 ಲಕ್ಷ ಡಾಲರ್​ಗಿಂತ ಕಡಿಮೆ!

ABOUT THE AUTHOR

...view details