ರಾಮನಗರ:ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ತಿಂದು ಅಸ್ವಸ್ಥರಾಗಿ 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚನ್ನಪಟ್ಟಣದಲ್ಲಿ ಭಾನುವಾರ ನಡೆದಿದೆ.
ರಾಮನಗರ: ಮದುವೆ ಸಮಾರಂಭದ ಐಸ್ ಕ್ರೀಂ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ - Ice Cream - ICE CREAM
ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ಸೇವಿಸಿ ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
Published : May 6, 2024, 8:04 AM IST
|Updated : May 6, 2024, 10:22 AM IST
ಚನ್ನಪಟ್ಟಣ ನಗರದ ಸಾತನೂರು ಸರ್ಕಲ್ ಸಮೀಪ ಮದುವೆ ಸಮಾರಂಭ ಏರ್ಪಾಡಾಗಿತ್ತು. ಊಟದ ನಂತರ ಐಸ್ ಕ್ರೀಂ ಸೇವಿಸಿದವರಿಗೆ ಅರ್ಧ ಗಂಟೆಯ ಬಳಿಕ ವಾಂತಿ, ಭೇದಿ ಶುರುವಾಗಿದೆ. ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳಾದ ಸುಮಾರು ಐವತ್ತಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 40 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರನ್ನು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ:ಬಂಟ್ವಾಳ ಹೊರವಲಯದಲ್ಲಿ ನೇತ್ರಾವತಿ ನದಿಗೆ ಇಳಿದ ಇಬ್ಬರು ಬಾಲಕಿಯರು ನೀರುಪಾಲು - girls drowned