ಉಡುಪಿ:ತಮ್ಮದೇ ಬಸ್‌ನ ಕೆಳಗೆ ಸಿಲುಕಿ ಮಾಲೀಕ ಸಾವನ್ನಪ್ಪಿದ ಘಟನೆ ಇಲ್ಲಿನ ಮಣಿಪಾಲದ 80 ಬಡಗಬೆಟ್ಟುವಿನ ಗ್ಯಾರೇಜ್‌ವೊಂದರಲ್ಲಿ ಬುಧವಾರ ಸಂಭವಿಸಿದೆ.
ಮಾಂಡವಿ ಬಸ್‌ನ ಮಾಲೀಕ ದಯಾನಂದ ಶೆಟ್ಟಿ (65) ಮೃತಪಟ್ಟವರು. ಇವರು ತಮ್ಮ ಬಸ್ ಅನ್ನು ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದು, ಅದರ ಪರಿಶೀಲನೆಗೆ ಬಂದಿದ್ದರು. ಈ ವೇಳೆ, ಬಸ್‌ನ ಎದುರು ನಿಂತಿದ್ದಾಗ ಚಾಲಕ ವಾಹನವನ್ನು ಚಲಾಯಿಸಿದ ಪರಿಣಾಮ ಅವರು ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.