ಕಲಬುರಗಿ: ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತವಾಗಿ ಜೆಸ್ಕಾಂ ಗುತ್ತಿಗೆ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ಕಮಲಾಪುರ ಬಳಿ ನಡೆದಿದೆ. ಕಲಬುರಗಿ ನಗರದ ಬಿದ್ದಾಪುರ ಕಾಲೊನಿಯ ನಿವಾಸಿ, ಮೂಲತಃ ನಾಗನಹಳ್ಳಿಯವರಾದ ವಿಜಯಕುಮಾರ ಶಿವಶರಣಪ್ಪ (45) ಮೃತರು.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತ: ಜೆಸ್ಕಾಂ ಬಿಲ್ ಕಲೆಕ್ಟರ್ ವಿಧಿವಶ - HEART ATTACK - HEART ATTACK
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಲಬುರಗಿಯ ಕಮಲಾಪುರ ಬಳಿ ನಡೆದಿದೆ.

Published : Apr 14, 2024, 6:50 PM IST
ವಿಜಯಕುಮಾರ ಶಿವಶರಣಪ್ಪ ಜೆಸ್ಕಾಂನಲ್ಲಿ ಗುತ್ತಿಗೆ ಆಧಾರದಡಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕರಬುರಗಿಯಿಂದ ಭಾಲ್ಕಿಯಲ್ಲಿನ ತಮ್ಮ ಸಹೋದರಿ ಮನೆಗೆ ತೆರಳುತ್ತಿದ್ದರು. ಮುಗಳಖೋಡ- ಬೀದರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಕಮಲಾಪುರ ಬಳಿ ಹೃದಯಾಘಾತವಾಗಿದೆ. ಅವರನ್ನು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸುಮಾರು 2 ಗಂಟೆವರಗೆ ಬಸ್ ರಸ್ತೆಯಲ್ಲಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದರು.
ಇದನ್ನೂ ಓದಿ:ಬೆಳಗಾವಿ: ಮಾಜಿ ಎಂಎಲ್ಸಿ ಸುನಂದಾ ಪಾಟೀಲ ವಿಧಿವಶ - Sunanda Patil passes away