ಕರ್ನಾಟಕ

karnataka

By ETV Bharat Karnataka Team

Published : Jan 29, 2024, 4:42 PM IST

ETV Bharat / state

ಕಾಂಗ್ರೆಸ್ ಸರ್ಕಾರಕ್ಕೆ ರಾಮನ ಶಾಪ ತಟ್ಟುತ್ತೆ ಎಂಬ ಆರ್​ ಅಶೋಕ್​ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿ

ವಿಪಕ್ಷ ನಾಯಕ ಆರ್​ ಅಶೋಕ್​ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಕಿಡಿ
ಸಚಿವ ಮಧು ಬಂಗಾರಪ್ಪ ಕಿಡಿ

ಶಿವಮೊಗ್ಗ:ವಿರೋಧ ಪಕ್ಷದ ನಾಯಕಆರ್.ಅಶೋಕ್ ಅವರೇ ಹಿಂದೂ ಮತ್ತು ರಾಮನ ವಿರೋಧಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ರಾಮನ ಶಾಪ ತಟ್ಟುತ್ತೆ ಎಂಬ ಆರ್​ ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧಪಕ್ಷದ ನಾಯಕರಾದ ಅವರಿಗೆ ಈ ರೀತಿಯ ಹೇಳಿಕೆ ಶೋಭೆ ತರಲ್ಲ ಎಂದು ಗರಂ ಆದರು. ಆರ್ ಅಶೋಕ್ ಅವರೇ ಹಿಂದೂ ವಿರೋಧಿ, ರಾಮನ ವಿರೋಧಿ. ಪ್ರತಿ ಊರುಗಳಲ್ಲೂ ರಾಮನಿದ್ದಾನೆ. ಅಯೋಧ್ಯೆಗೆ ಹೋಗದಿದ್ದವರು ರಾಮನ ವಿರೋಧಿಗಳ? ರಾಜಕಾರಣದಲ್ಲಿ ಅಂಬೇಡ್ಕರ್ ಅವರ ಹೇಳಿಕೊಟ್ಟಿದ್ದನ್ನು ಅನುಸರಿಸಬೇಕು. ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ಕುರಿತು ಏಕವಚನದಲ್ಲಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರ ಬಾಡಿ ಲ್ಯಾಂಗ್ವೇಜ್ ಅಗೌರವ ತರುವ ರೀತಿಯಲ್ಲಿ ಇರಲಿಲ್ಲ. ಸಿದ್ದರಾಮಯ್ಯನವರ ಕಾಳಜಿಯನ್ನು ನೋಡಿ ಅನಗತ್ಯವಾಗಿ ಅಪಾರ್ಥ ಮಾಡಿಕೊಳ್ಳಬೇಡಿ. ಅವರ ಹೇಳಿಕೆ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಆದರೆ ರಾಷ್ಟ್ರಪತಿಗಳ ಮೇಲಿನ ಸಿಎಂ ಅವರ ಕಾಳಜಿಗೆ ಉತ್ತರ ಯಾರು ಕೊಡುತ್ತಾರೆ?. ಏತಕ್ಕಾಗಿ ಪಾರ್ಲಿಮೆಂಟ್ ಮತ್ತು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಲಿಲ್ಲ? ಇದು ದೊಡ್ಡ ತಪ್ಪು. ಅವರಿಗೂ ಆಹ್ವಾನಿಸಿ, ಮಾನವಿಯತೆಯನ್ನು ತೋರಿಸಬೇಕಿತ್ತು ಎಂದು ಹೇಳಿದರು.

ಬಳಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನ ಗೆಲ್ಲಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಧಾನಸಭಾ ಚುನಾವಣೆಯಲ್ಲೂ 150 ಸ್ಥಾನ ಗೆಲ್ಲುವುದಾಗಿ ಬಿಜೆಪಿಯವರು ಹೇಳುತ್ತಿದ್ದರು. ಆದರೆ ಗೆದ್ದಿದ್ದು 65 ಮಾತ್ರ ಎಂದರು. ಬಿಹಾರ ಸಿಎಂ ನಿತೀಶ್ ಕುಮಾರ್ ಪುನಃ ಎನ್​ಡಿಎ ಒಕ್ಕೂಟ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಇದು ಖಂಡಿತ ಸರಿಯಾದ ನಡೆ ಅಲ್ಲ. ನಮಗೆ ತಾತ್ಕಾಲಿಕವಾದ ಹಿನ್ನಡೆಯಾಗಿರಬಹುದು. ಆದರೆ ಐಎನ್​ಡಿಐಎ ಒಕ್ಕೂಟದ ಹೋರಾಟ ನಿಲ್ಲಲ್ಲ ಎಂದರು.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈ ಬಾರಿಯೂ ಸಂಸದ ಬಿ ವೈ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂಬ ಹೇಳಿಕೆ ಮಾತನಾಡಿ, ಇದನ್ನು ಅವರೇ ಸರಿ ಮಾಡುತ್ತಾರೆ ಎಂದರು.

ಕಾಂಗ್ರೆಸ್ ರಾಜ್ಯದಲ್ಲಿ ತುಷ್ಟಿಕರಣದ ರಾಜಕೀಯ ಮಾಡುತ್ತಿದೆ: ಬಿ.ವೈ.ರಾಘವೇಂದ್ರ

ಕಾಂಗ್ರೆಸ್ ರಾಜ್ಯದಲ್ಲಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಂಡ್ಯದ‌ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಮಾಡಿ ರಾಷ್ಟ್ರಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ನಮ್ಮ ಅಭ್ಯಂತರ ಇಲ್ಲ. ಹಿಂದುತ್ವ ಅಳಿಸಬಹುದು ಅನ್ನೋದು ನಿಮ್ಮ ಕನಸು ಅಷ್ಟೇ ಎಂದರು.

ಇದನ್ನೂ ಓದಿ:ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ತಿಳಿದಿರಲಿ: ಬಿಜೆಪಿ ವಿರುದ್ಧ ಸಿಎಂ ಕಿಡಿ

ABOUT THE AUTHOR

...view details