ಚಿಕ್ಕೋಡಿ : ಇಂದು ಚಿಕ್ಕೋಡಿ ನ್ಯಾಯಾಲಯದ ಆವರಣಕ್ಕೆ ಹುಚ್ಚು ನಾಯಿಯೊಂದು ನುಗ್ಗಿ ಆರು ಜನರನ್ನು ಕಚ್ಚಿರುವ ಘಟನೆ ಸಂಭವಿಸಿದೆ. ಗಾಯಾಳುಗಳು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳಿಕ ಪಟ್ಟಣದ ಬಸವ ವೃತ್ತದಲ್ಲಿ ನಾಯಿ ಓಡಿಸಲು ಕೈಯಲ್ಲಿ ದೊಣ್ಣೆ ಹಿಡಿದು ಜನರು ಪ್ರಯತ್ನ ಮಾಡಿದ್ದಾರೆ. ಓರ್ವ ಸ್ಥಳೀಯ ದೊಣ್ಣೆಯಿಂದ ಹೊಡೆದು ನಾಯಿ ಕೊಲ್ಲಲು ಯತ್ನಿಸಿದರೂ ಅಲ್ಲಿಂದ ಶ್ವಾನ ಪರಾರಿಯಾಗಿದೆ. ಹುಚ್ಚು ನಾಯಿ ಓಡಾಟದ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ನಾಯಿ ನೋಡಿದರೂ ಸ್ಥಳೀಯರಲ್ಲಿ ಆತಂಕ ಮೂಡಿದೆ. ಪುರಸಭೆ ವತಿಯಿಂದ ನಾಯಿ ಹುಡುಕಾಟ ಮುಂದುವರಿದಿದೆ.