ಕರ್ನಾಟಕ

karnataka

ETV Bharat / state

ಕಲಬುರಗಿ: ವರಸೆಯಲ್ಲಿ ಅಣ್ಣ-ತಂಗಿ ಎಂದು ಮದುವೆಗೆ ಪೋಷಕರ ವಿರೋಧ; ವಿವಾಹವಾಗಿ ಪ್ರೇಮಿಗಳು ಆತ್ಮಹತ್ಯೆ

ಪೋಷಕರು ಮದುವೆ ನಿರಾಕರಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಡ್ರಾಮಿಯಲ್ಲಿ ನಡೆದಿದೆ.

ಕಲಬುರಗಿ: ವರಸೆಯಲ್ಲಿ ಅಣ್ಣ-ತಂಗಿ ಎಂಬ ಕಾರಣಕ್ಕೆ ಮದುವೆಗೆ ಪೋಷಕರ ವಿರೋಧ, ವಿವಾಹವಾಗಿ ಪ್ರೇಮಿಗಳು ಆತ್ಮಹತ್ಯೆ
lovers-committed-suicide-in-kalaburagi

By ETV Bharat Karnataka Team

Published : Feb 3, 2024, 10:02 PM IST

ಕಲಬುರಗಿ:ಪೋಷಕರು ಮದುವೆ ನಿರಾಕರಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಡ್ರಾಮಿ ತಾಲೂಕಿನ‌ ಮಾಗಣಗೇರಾ ಗ್ರಾಮದಲ್ಲಿ ನಡೆದಿದೆ. ಗೊಲ್ಲಾಳಪ್ಪ (24) ಹಾಗೂ ಶಶಿಕಲಾ (20) ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರು ವರಸೆಯಲ್ಲಿ ಅಣ್ಣ - ತಂಗಿಯಾಗಿದ್ದರಿಂದ ಪೋಷಕರು ಮದುವೆಗೆ ನಿರಾಕರಿಸಿದ್ದರು.

ಇತ್ತೀಚಿಗೆ ಶಶಿಕಲಾಳಿಗೆ ಯುವಕನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿತ್ತು. ಮುಂದಿನ ತಿಂಗಳು ಮದುವೆ ಮಾಡುವುದಕ್ಕೆ ನಿರ್ಧರಿಸಲಾಗಿತ್ತು. ಈ ನಡುವೆ ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟಿರಲಾಗದ ಕಾರಣಕ್ಕೆ ಗೊಲ್ಲಾಳಪ್ಪ ಶುಕ್ರವಾರ ಶಶಿಕಲಾಳನ್ನು ತನ್ನೊಂದಿಗೆ ಕರೆದೊಯ್ದು ಗ್ರಾಮದ ಹೊರವಲಯದ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ದ. ಬಳಿಕ ತಾವು ಮದುವೆ ಆಗಿರುವುದನ್ನು ದೃಢಪಡಿಸಲು ಇಬ್ಬರೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಆನೇಕಲ್: ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ, ದೂರು ದಾಖಲು

ABOUT THE AUTHOR

...view details