ಗದಗ :ಬೇರೊಬ್ಬನ ಜೊತೆ ಮದುವೆ ಮಾಡಿದಕ್ಕೆ ಮನನೊಂದು ಯುವತಿ ತನ್ನ ಪ್ರಿಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ನಡೆದಿದೆ. ಅಪ್ಪಣ್ಣ ಕನಕಪ್ಪ ಗೊರಕಿ (28) ಹಾಗೂ ಲಲಿತಾ ರಾಜೇಂದ್ರ ಹಲಗೇರಿ (24) ಮೃತ ಪ್ರೇಮಿಗಳು.
ಪ್ರೀತಿಗೆ ವಿರೋಧ, ಬೇರೊಬ್ಬನ ಜೊತೆ ಮದುವೆ: ಗದಗದಲ್ಲಿ ಪ್ರೇಮಿಗಳು ಆತ್ಮಹತ್ಯೆ - lovers suicide - LOVERS SUICIDE
ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವಕ - ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Published : Apr 13, 2024, 11:02 AM IST
ಅಪ್ಪಣ್ಣ ಕನಕಪ್ಪ ಗೊರಕಿ ಮತ್ತು ಲಲಿತಾ ರಾಜೇಂದ್ರ ಹಲಗೇರಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮನೆಯವರು ಈ ಜೋಡಿಯ ಪ್ರೀತಿಯನ್ನು ನಿರಾಕರಿಸಿ ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದೇ ತಿಂಗಳು ಏಪ್ರಿಲ್ 4 ರಂದು ಲಲಿತಾಳನ್ನು ಬೇರೊಬ್ಬನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಹೀಗಾಗಿ, ಪ್ರೀತಿಸಿದವರ ಜೊತೆ ವಿವಾಹವಾಗದ ಹಿನ್ನೆಲೆ ಮನನೊಂದು ಜೋಡಿ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನರೇಗಲ್ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :ಕೊಪ್ಪಳ: ಪತ್ನಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ - Koppala Crime Case